ಮಂಗಳೂರು : ಮಂಗಳೂರಿನ ಪ್ಲ್ಯಾಟ್ ನ 7ನೇ ಮಹಡಿಯಿಂದ ಹಾರಿ ಸಮೀರ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
30ವರ್ಷದ ಸಮೀರ್ ಪಡೀಲ್ ನಿವಾಸಿಯಾಗಿದ್ದಾನೆ. ಈತ ಮಾನಸಿಕ ಕಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಈತನಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು.ಈ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕೋವಿಡ್ ನಿಂದ ರೋಗಿಗಳನ್ನು ಐಸೋಲೇಷನ್ ಮಾಡುವುದು ಮತ್ತಷ್ಟು ರೋಗಿಗಳನ್ನು ಆತ್ಮಸ್ತೈರ್ಯವನ್ನು ಕುಗ್ಗಿಸಲಿದೆ ಎಂದು ಇತ್ತೀಚೆಗೆ ತಜ್ಞರು ಹೇಳಿದ್ದರು. ರೋಗಿಗಳಿಗೆ ಮಾನಸಿಕವಾಗ ಸ್ತೈರ್ಯ ತುಂಬುವ ಕೆಲಸವನ್ನು ಮಾಡಬೇಕಾಗುತ್ತದೆ. ಆದರೆ ಯುವ ಜನತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆಘಾತಕಾರಿಯಾಗಿದೆ. ಕಿನ್ನತೆ ಸೇರಿದಂತೆ ಮಾನಸಿಕ ಕಾಯಿಲೆಗಳಿದ್ದವರನ್ನು ನಾವು ಕೋವಿಡ್ ಹಿನ್ನೆಲೆಯಲ್ಲಿ ಪ್ರತ್ಯೇಕಿಸುವಾಗಲೂ ಹೆಚ್ಚು ಅವರ ಕಡೆ ಗಮನಹರಿಸಬೇಕಿದೆ.