ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರದ 7ನೇ ವರ್ಷದ ಸಂಭ್ರಮಾಚರಣೆಯ ಸೇವಾ ಕಾರ್ಯದ ಅಂಗವಾಗಿ ಅನಂತಾಡಿ ಗ್ರಾಮದ ಗೋಳಿಕಟ್ಟೆ ಜಂಕ್ಷನ್ ನಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೋಲಾರ್ ಹೈ ಮಾಸ್ಕ್ ದೀಪಕ್ಕೆ ಚಾಲನೆ ನೀಡಿದರು.
ಸೇವಾ ಕಾರ್ಯದ ಮೂಲಕ ಆಚರಣೆ ಮಾಡಬೇಕು ಎನ್ನುವ ಯೋಚನೆಯಂತೆ ಈ ಭಾಗದ ಸಾರ್ವಜನಿಕ ರಿಗೆ ಬಹುಉಪಯೋಗದ ದೃಷ್ಟಿಯಿಂದ ಸೋಲಾರ್ ಹೈಮಾಸ್ಕ್ ದೀಪವನ್ನು ಅಳವಡಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ನೆಟ್ಲ ಮುಡ್ನೂರು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್, ಅನಂತಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ, ಮಾಣಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರೊನಾಲ್ಡ್ ಡಿಸೋಜ, ಪ್ರಧಾನಕಾರ್ಯದರ್ಶಿ ಸನತ್ ಕುಮಾರ್, ನೇರಳಕಟ್ಟೆ ವ್ಯವಸಾಯ ಸಹಕಾರಿ ಕೇಂದ್ರದ ಅಧ್ಯಕ್ಷ ಪುಷ್ಪರಾಜ ಚೌಟ, ಉಪಾಧ್ಯಕ್ಷ ತನಿಯಪ್ಪ ಗೌಡ, ಮಾಜಿ ತಾ.ಪಂ.ಸದಸ್ಯೆ ಗೀತಾಚಂದ್ರಶೇಖರ್, ಪ್ರಮುಖರಾದ ಗಣೇಶ್ ರೈ ಮಾಣಿ, ಯಶವಂತ ನಾಯ್ಕ್ ನಗ್ರಿ, ನಾರಾಯಣ ಶೆಟ್ಟಿ ಮಾಣಿ, ಶಕೀಲ್ ನೆಟ್ಲ ಮುಡ್ನೂರು,ಅಶೋಕ್ ರೈ, ಧನಂಜಯ್, ಜಯಂತಿ,ದಿನೇಶ್ ಅನಂತಾಡಿ ಹರೀಶ್ಉಪಸ್ಥಿತರಿದ್ದರು.
ಅನಂತಾಡಿ: ಸೇವಾ ಚಟುವಟಿಕೆಯ ಅಂಗವಾಗಿ ಸೋಲಾರ್ ದೀಪ ಅಳವಡಿಕೆ