ಬಂಟ್ವಾಳ: ನರಿಕೊಂಬು, ಮಾರುತಿ ನಗರ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ (ರಿ.) ಇದರ 2021-22ನೇ ಸಾಲಿನ ಅಧ್ಯಕ್ಷರಾಗಿ ಸತೀಶ ಬಿ. ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಹರೀಶ್ ಮಾಣಿಮಜಲು, ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಮಹೇಶ್ ಮಾಣಿಮಜಲು, ಕೋಶಾಧಿಕಾರಿಯಾಗಿ ಶೈಲೇಶ್ ಕೆ, ಕ್ರೀಡಾ ಕಾರ್ಯದರ್ಶಿಗಳಾಗಿ ದಿಲ್ ರಾಜ್, ರಾಘವೇಂದ್ರ ಬಳ್ಳಕ್ಕುರಾಯ, ಸದಾನಂದ ಗೌಡ, ಅಭಿಷೇಕ್ ಮಾಣಿಮಜಲು, ಸಂಘಟನಾ ಕಾರ್ಯದರ್ಶಿಯಾಗಿ ಪ್ರದೀಪ್ ಕೆ, ಭಜನಾ ಸಂಘಟಕರಾಗಿ ಶಶಿಧರ ಬಿ, ದೇವರಾಜ್ ಭರತ್ ಅವರನ್ನು ಆರಿಸಲಾಯಿತು.
ಪ್ರಶಾಂತ್ ಕರ್ಬೆಟ್ಟು ಅಧ್ಯಕ್ಷತೆಯಲ್ಲಿ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.