ಬಂಟ್ವಾಳ: ಅಭಿಷೇಕ್ ಸುವರ್ಣ ಅಜಿಲ ಮೊಗೇರ್ ಮತ್ತು ಅವರ ಗೆಳೆಯರ ಬಳಗದಿಂದ ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬಂಟ್ವಾಳದಿಂದ ಮಂಗಳೂರು ವರೆಗೆ ಊಟ ತಿಂಡಿ ಇಲ್ಲದೆ ಇದ್ದ ಸರ್ವರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ಲಾಕ್ ಡೌನ್ ನಿಂದಾಗಿ ಊಟ, ನೀರಿಲ್ಲದೆ ಬೀದಿಬದಿಯಲ್ಲಿ ಕಷ್ಟಪಡುತ್ತಿರುವ ಅದೆಷ್ಟೋ ಮಂದಿ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ ಎಂಬುವುದನ್ನು ಮನಗಂಡ ಅಭಿಷೇಕ್ ಸುವರ್ಣ ಮತ್ತವರ ಗೆಳೆಯರು ಈ ಸೇವೆಯನ್ನು ಮಾಡುತ್ತಿದ್ದಾರೆ.
ಎಲ್ಲದಕ್ಕಿಂತಲೂ ದೊಡ್ಡ ಧರ್ಮ ಮಾನವೀಯ ಧರ್ಮ. ಅಲ್ಲಿ ಧರ್ಮದ ಹಂಗುಗಳಿಲ್ಲ. ಜಾತಿಯ ಮೇಲು ಕೀಳಿಲ್ಲ. ಅಲ್ಲಿ ಹಸಿದವನು ಮತ್ತು ಆಹಾರ ನೀಡುವವನು ಮಾತ್ರ. ಹೀಗಿರುವಾಗ ಅವರಿಗೆ ಊಟ ನೀಡುವುದು ನಮ್ಮ ಕರ್ತವ್ಯ.
ಈ ಸಮಯದಲ್ಲಿ ಯಾರಾದರು ಹಸಿವಿನಿಂದ ಇದ್ದರೆ ಅದು ಸರ್ಕಾರದ ಮಾತ್ರ ಹೊಣೆಯಲ್ಲ. ಮನುಷ್ಯರಾದ ನಮ್ಮದೂ ಕೂಡ ಜವಾಬ್ಧಾರಿ. ಆದ್ದರಿಂದ ಅಭಿಷೇಕ್ ಸುವರ್ಣ ಅಜಿಲ ಮೊಗೇರ್ ಮತ್ತವರ ತಂಡ ವಾರಕ್ಕೊಂದು ಸಲ ಅವರ ಕಣ್ಣು ಯಾರು ಹಸಿವೆಯಿಂದ ತತ್ತರಿಸಿತ್ತಾರೋ ಅವರಿಗೆಲ್ಲಾ ಊಟ ನೀಡುವ ಭರವಸೆ ನೀಡಿದ್ದಾರೆ.
ಅದೇ ರೀತಿ ಮಂಗಳೂರು ಕೊಟ್ಟಾರದ ಸ್ನೇಹದೀಪ್ ಎಚ್.ಐ.ವಿ. ಪೀಡಿತ ಅನಾಥ ಮಕ್ಕಳ ಆಶ್ರಮ ಮತ್ತು ಮೈಮುನಾ ಫೌಂಡೇಶನ್ ಇದರ ಮಾನಸಿಕ ಅಸ್ವಸ್ಥರ ಆಶ್ರಮಕ್ಕೂ ಊಟ ವಿತರಿಸಲಾಯಿತು.
ನಮ್ಮೂರಿಗೆ ನಾವೇ ಕಾವಲುದಾರರು. ನಮ್ಮವರು ಹಸಿವಿನಿಂದ ಬಳಲುತ್ತಿದ್ದರೆ
ಅದಕ್ಕೆ ನಾವೇ ಜವಾಬ್ದಾರರು ಎಂಬ ಉದ್ದೇಶದಿಂದ ಈ ಸೇವೆ ಮಾಡಲಾಗುತ್ತಿದೆ ಎಂದ ಅವರ ಸ್ನೇಹಿತರ ತಂಡ ತಿಳಿಸಿದೆ.