ಬಂಟ್ವಾಳ: ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿ ನಡೆದಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಕುಟುಂಬಗಳ ಹತ್ತು ಮಂದಿ ಭೀಕರವಾಗಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಆರು ಮಂದಿಯನ್ನು ಇರಿದು ಕೊಲೆ ಮಾಡಲಾಗಿದೆ. ನಾಲ್ಕು ಮಂದಿ ಸಜೀವವಾಗಿ ದಹನವಾಗಿದ್ದು ಇದು ಕೊಲೆಯೋ, ಆಕಸ್ಮಿಕ ಘಟನೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶಾಖಪಟ್ಟಣ ಜಿಲ್ಲೆಯ ಜುತ್ತಾಡದಲ್ಲಿ ರಮಣ, ಉಷಾರಾಣಿ, ರಮಾದೇವಿ, ಅರುಣ, ಮಕ್ಕಳಾದ ಉದಯ, ಉರ್ವೀಷ ಎಂಬವರನ್ನು ಇರಿದು ಕೊಲೆ ಮಾಡಲಾಗಿದೆ. ಈ ಕುಟುಂಬದ ಅಪ್ಪಲರಾಜು ಎಂಬಾತ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ದ್ವೇಷದಿಂದ ಈತ ಕೊಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಮಿಥಿಲಾಪುರಿ ಉಡಾ ಕಾಲಾನಿಯಲ್ಲಿ ಒಂದೇ ಕುಟುಂಬದ ಬಂಗಾರುನಾಯ್ದು(೫೦), ಡಾ. ನಿರ್ಮಲಾ(೪೪), ದೀಪಕ್(೨೨), ಕಶ್ಯಪ್(೧೯) ಎಂಬವರು ಸಜೀವವಾಗಿ ದಹನಗೊಂಡಿದ್ದಾರೆ. ಮನೆಗೆ ಬೆಂಕಿ ಹಚ್ಚಿ ಇವರನ್ನು ಕೊಲೆ ಮಾಡಿರಬೇಕು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ.