ದೆಹಲಿ: ರೈಲುಗಳಲ್ಲಿ ಪ್ರಯಾಣಿಸುವಾಗ ಮತ್ತು ರೈಲು ನಿಲ್ದಾಣದ ಆವರಣದಲ್ಲಿ ಮಾಸ್ಕ್ ಧರಿಸದೆ ಇದ್ದರೆ 500 ರೂಪಾಯಿ ದಂಡ ವಿಧಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು 500 ರೂಪಾಯಿ ದಂಡ ವಿಧಿಸುವ ಈ ಆದೇಶ ಮುಂದಿನ 6 ತಿಂಗಳವರೆಗೆ ಜಾರಿಗೆ ತರಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಇಷ್ಟೇ ಅಲ್ಲದೆ ರೈಲುಗಳಲ್ಲಿ ಬೇಯಿಸಿದ ಆಹಾರದ ಬದಲಿಗೆ ಸಿದ್ಧಪಡಿಸಿದ ಪ್ಯಾಕ್ ಮಾಡಿದ ಆಹಾರ ನೀಡಲು ಮಾರ್ಗಸೂಚಿ ಹೊರಡಿಸಲಾಗಿದೆ. ನಿಲ್ದಾಣದಲ್ಲಿ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಮತ್ತು ಟೇಕ್ ಎವೆ ಕಿಟ್ ವಸ್ತುಗಳು ಮಾರಾಟಕ್ಕೆ ಸಿಗುವಂತೆ ಮಾಡಲಾಗಿದೆ.