ಬಂಟ್ವಾಳ: ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಾಗಿಲು ಮುರಿದು ನಗದು ಕಳ್ಳತನ ಮಾಡಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆಯಲ್ಲಿ ನಡೆದಿದೆ.
ತುಂಬೆ ಗ್ರಾಮದ ಮಜಿ ಎಂಬಲ್ಲಿ ನಾಲ್ಕು ಮನೆಗಳಿಗೆ ನುಗ್ಗಿದ ಕಳ್ಳರು ಒಂದು ಮನೆಯಿಂದ ಗೊಡ್ರೆಜ್‌ನಲ್ಲಿರಿಸಿದ್ದ 8 ಸಾವಿರ ರೂ. ನಗದನ್ನು ದೋಚಿಕೊಂಡು ಹೋಗಿದ್ದಾರೆ.
ಇನ್ನುಳಿದ ಮೂರು ಮನೆಗಳಿಗೆ ಮನೆಗೆ ನುಗ್ಗಿದ ಕಳ್ಳರು ಸಂಪೂರ್ಣ ಮನೆಯನ್ನು ಜಾಲಾಡಿದ್ದು ಯಾವುದೇ ವಸ್ತುಗಳು ಸಿಗದ ಕಾರಣ ಬರಿ ಕೈಯಲ್ಲಿ ವಾಪಾಸು ಆಗಿದ್ದಾರೆ.
ಮಜಿ ನಿವಾಸಿ ಮನೋಜ್ ಕೊಟ್ಟಾರಿ ಎಂಬವರ ಮನೆಯ ಹಿಂಬಾಗಿಲ ಚಿಲಕ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಗೊಡ್ರೆಜ್ ನಲ್ಲಿದ್ದ ಎಂಟು ಸಾವಿರ ರೂ. ನಗದನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ಅವರು ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಭಾಸ್ಕರ, ರಾಘವ, ಮಾದವ ಎಂಬವರ ಮನೆಗೂ ನುಗ್ಗಿ ಮನೆಯನ್ನು ಜಾಲಾಡಿದ್ದಾರೆ.
ಶಿವದೂತ ಗುಳಿಗ ನಾಟಕ: ತುಂಬೆ ಮಜಿಯಲ್ಲಿ ನಿನ್ನೆ ರಾತ್ರಿ “ಶಿವದೂತ ಗುಳಿಗ” ಎಂಬ ನಾಟಕ ಪ್ರದರ್ಶನ ನಡೆಯುತ್ತಿರುವ ಕಾರಣ ಈ ಪರಿಸರದ ಬಹುತೇಕ ಮನೆಯವರು ನಾಟಕ ವೀಕ್ಷಿಸಲು ಮನೆಗೆ ಬೀಗ ಹಾಕಿ ತೆರಳಿದ್ದರು. ನಾಟಕ ವೀಕ್ಷಿಸಿ ವಾಪಾಸು ಮನೆಗೆ ತೆರಳಿ ನೋಡಿದಾಗ ಮನೆಯ ಬೀಗ ಮುರಿದು ಮನೆಗೆ ಪ್ರವೇಶ ಮಾಡಿರುವುದು ಗಮನಕ್ಕೆ ಬಂದಿದೆ.
ಸ್ಥಳಕ್ಕೆ ಬಂಟ್ವಾಳ ಎಸ್.ಐ. ಪ್ರಸನ್ನ, ಅಪರಾಧ ವಿಭಾಗದ ಎಸ್.ಐ. ಸಂಜೀವ, ಎಚ್.ಸಿ. ಸುರೇಶ್ ಹಾಗೂ ಬೆರಳಚ್ಚು ತಜ್ಞರು, ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.