ತಮಿಳುನಾಡು ವಿಧಾನಸಭಾ ಚುನಾವಣಾ ಬಂದೋಬಸ್ತ್ ಕರ್ತವ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ 15 ಘಟಕಗಳಿಂದ 447 ಗೃಹರಕ್ಷಕರನ್ನು ನಿಯೋಜಿಸಲಾಗಿತ್ತು. . ಚುನಾವಣಾ ಕರ್ತವ್ಯ ಮುಗಿಸಿ ಎಲ್ಲಾ 447 ಗೃಹರಕ್ಷಕರು ಸುರಕ್ಷಿತವಾಗಿ ಈ ಕಛೇರಿಯಲ್ಲಿ ವರದಿ ಮಾಡಿಕೊಂಡಿರುತ್ತಾರೆ. ಚುನಾವಣಾ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕರಿಗೆ ಮೇಲಾಧಿಕಾರಿಗಳ ಆದೇಶದಂತೆ RT PCR and RAT ಪರೀಕ್ಷೆ ಮಾಡಿಸಲಾಗಿದೆ.
ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ರವರ ಸಮ್ಮುಖದಲ್ಲಿ ಎಲ್ಲರಿಗೂ ಕೋವಿಡ್ ಪರೀಕ್ಷೆಯನ್ನು ಮಾಡಿಸಲು ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಕರ್ತವ್ಯ ನಿರ್ವಹಿಸಿದ ಎಲ್ಲಾ ಗೃಹರಕ್ಷಕರಿಗೆ ಸಮಾದೇಷ್ಟರು ಧನ್ಯವಾದಗಳನ್ನು ತಿಳಿಸಿರುತ್ತಾರೆ.