ಬಂಟ್ವಾಳ: ತುಳುನಾಡಿನ ದೈವಾರಾದನೆಯ ಸಂದಿ ಪಾಡ್ದನದಲ್ಲಿ ಉಲ್ಲೇಖವಿರುವ ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯ ಸುಳ್ಳಮಲೆ ಬೆಟ್ಟ ಬಂಟ್ವಾಳ ತಾಲೂಕಿನಲ್ಲೇ ಚಿರಪರಿಚಿತ ಜಾಗ. ಇಲ್ಲಿ ಪ್ರಾಚೀನ, ಧಾರ್ಮಿಕ ಹಿನ್ನೆಲೆ ಇರುವ ಏಳು ಕೆರೆಗಳಿದ್ದು ಅವು ಕಾಲಗರ್ಭಗಳಲ್ಲಿ ವೈಭವವನ್ನು ವನ್ನು ಪಡೆದಿದ್ದು ಈಗ ಶಿಥಿಲವಾಗಿದೆ.ಪ್ರಸ್ತುತ ಸುಳ್ಳಮಲೆ ಸರಕಾರದ ಅರಣ್ಯ ಇಲಾಖೆಯ ರಕ್ಷಿತಾರಣ್ಯವಾಗಿದೆ.
ಇದೀಗ ಅರಣ್ಯ ಇಲಾಖೆಯು ಸುಳ್ಳಮಲೆಯ ಚಾರಿತ್ರಿಕ ಹಿನ್ನೆಲೆಯ ಏಳು ಕೆರೆ ಯನ್ನು ಎಂ.ಜಿ.ಎನ್.ಆರ್.ಇ.ಜಿ .ಎಸ್( ಉದ್ಯೋಗ ಖಾತರಿ ಯೋಜನೆ) ಮೂಲಕ ಹೂಳೆತ್ತುವ ಮೂಲಕ ಪುನರ್ನಿರ್ಮಾಣ ಮಾಡಲು ಸ್ತಳೀಯ ಮಾಣಿ ಗ್ರಾಮ ಪಂಚಾಯತ್ ಗೆ ನಿರ್ದೇಶನನದ ಜೊತೆಯಲ್ಲಿ ಶರತ್ತುಬದ್ದ ಅನುಮತಿ ನೀಡಿದೆ.ಇದು ಸ್ತಳೀಯರು ಹಾಗೂ ಗ್ರಾಮಸ್ಥರಲ್ಲಿ ಸಂತಸದ ವಿಚಾರ ಆಗಿರುತ್ತದೆ. ಮಾತ್ರವಲ್ಲದೆ ” ಗುಹಾತೀರ್ಥ ” ಮಾತ್ರ ಅಲ್ಲದೆ ಸ್ತಳೀಯ ಸುತ್ತಮುತ್ತಲಿನ ಹಲವಾರು ಧಾರ್ಮಿಕ ಕ್ಷೇತ್ರ ಗಳ ಜೊತೆಯಲ್ಲಿ ಅವಿನಭಾವ ಸಂಬಂಧ ಹೊಂದಿರುವ ಈ ಸುಳ್ಳಮಲೆಯನ್ನು ಹಳೆಯದಾದ ಧಾರ್ಮಿಕ ಹಿನ್ನೆಲೆಯಲ್ಲಿ ಪುನರ್ನಿರ್ಮಾಣ ಮಾಡಲು ಐತಿಹಾಸಿಕ ಪುರಾತತ್ವ ಇಲಾಖೆ , ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಉತ್ತಮ ಧಾರ್ಮಿಕ ಕೇಂದ್ರ ವಾಗಿ ನಿರ್ಮಿಸಲಿ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ಕೇಳಿಬರುತ್ತದೆ.