- ಬಂಟ್ವಾಳ : ಪರೀಕ್ಷೆ ಬರೆಯಲು ತಯಾರಾಗಿದ್ದ ಬಿಕಾಂ ವಿದ್ಯಾರ್ಥಿಯೋರ್ವ ಹೃದಯಘಾತದಿಂದ ಸಾವನಪ್ಪಿದ ಘಟನೆ ಏ.17 ರ ಶನಿವಾರ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಸುಳ್ಯದ ಅಜ್ಜಾವರದ ಇರುವಂಬಳ್ಳ ಹಸೈನಾರ್ ಅವರ ಪುತ್ರ ಸಿನಾನ್ (20) ಮೃತಪಟ್ಟ ವಿದ್ಯಾರ್ಥಿ.
ಸಿನಾನ್ ತನ್ನ ಪದವಿ ಶಿಕ್ಷಣದ ಜತೆಯಲ್ಲೇ ಕುಂಬ್ರದ ಕಾಲೇಜೊಂದರಲ್ಲಿ ಧಾರ್ಮಿಕ ಶಿಕ್ಷಣವನ್ನು ಅಧ್ಯಯನ ಮಾಡುತ್ತಿದ್ದ.
ಮಂಗಳೂರಿನಲ್ಲಿ ಶನಿವಾರ ನಡೆಯಬೇಕಾಗಿದ್ದ ಬಿಕಾಂ ಪದವಿಗೆ ಸಂಬಂಧಿಸಿದ ಪರೀಕ್ಷೆಗೆ ತಯಾರಿ ನಡೆಸಿ , ಪರೀಕ್ಷೆ ಎದುರಿಸಲೆಂದು ಶುಕ್ರವಾರ ಸಿನಾನ್ ಪಾಣೆಮಂಗಳೂರು ನಂದಾವರದಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿ ಉಳಿದುಕೊಂಡಿದ್ದ. ಇಂದು ಬೆಳಗ್ಗೆ ಪರೀಕ್ಷೆಗೆ ಹೊರಡುವ ತಯಾರಿಯಲ್ಲಿದ್ದಾಗ ಸಿನಾನ್ ಗೆ ಇಂದು ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾನೆಂದು ತಿಳಿದು ಬಂದಿದೆ.