ದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತೀಚೆಗಷ್ಟೇ ಸಿಂಗ್ ಅವರು ಕೊರೊನಾ ಲಸಿಕೆಯ ಎಕಡೂ ಡೋಸನ್ನು ಪಡೆದಿದ್ದರು. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಮನಮೋಹನ್ ಸಿಂಗ್, ದೇಶಾದ್ಯಂತ ಲಸಿಕೆ ನೀಡುವುದನ್ನು ಮತ್ತು ಕೊರೊನಾ ವಿರೋಧಿ ಔಷಧಿ ಪೂರೈಕೆಯನ್ನು ಹೆಚ್ಚಿಸುವುದು ಸೇರಿದಂತೆ ಐದು ಅಂಶಗಳ ಸಲಹೆಯನ್ನು ಮಾಡಿದ್ದರು.