ಬಂಟ್ವಾಳ: ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪ.ಜಾತಿ., ಪ.ಪಂಗಡ ಹಾಗೂ ವಿಕಲಚೇತನರಿಗೆ ಗ್ರಾಮ ಪಂಚಾಯತ್ ಶೇ.25 ಮತ್ತು ಶೆ 5ರ ನಿಧಿಯಿಂದ ನೀರಿನ ಟ್ಯಾಂಕ್ ಮತ್ತು ಧನ ಸಹಾಯ ವಿತರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಉಪಾಧ್ಯಕ್ಷ ವಿಮಲ ಮೋಹನ್, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ಪಂಚಾಯತ್ ಸದಸ್ಯರಾದ ಸಂದೇಶ್ ಶೆಟ್ಟಿ, ಸುರೇಶ್ ಕುಲಾಲ್, ಉದಯ ಪೂಜಾರಿ, ಸುನೀಲ್ ಶೆಟ್ಟಿಗಾರ್ ದಾಮೋದರ್ ಪೂಜಾರಿ, ಶಕುಂತಳಾ, ರಾಜೀವಿ, ವಿದ್ಯಾ ಪ್ರಭು, ಹೇಮಲತಾ, ಶಾಂತ, ಪ್ರೇಮಾ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮ ನಾಯ್ಕ್ ಸ್ವಾಗತಿಸಿದರು. ಕಾರ್ಯದರ್ಶಿ ರೋಹಿಣಿ ವಂದಿಸಿದರು.