ಬಂಟ್ವಾಳ: ಸಜೀಪಮೂಡ ಗ್ರಾಮದ ಮಿತ್ತ ಮಜಲು ಕ್ಷೇತ್ರಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳೇಪಾಡಿಗುತ್ತು ಅವರ ಅನುದಾನದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪವನ್ನು ವಾರ್ಷಿಕ ಬಿಸು ಜಾತ್ರೆಯ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಜಿಪ ಮಾ ಗಣೆ ತಂತ್ರಿ ಎಂ.ಸುಬ್ರಮಣ್ಯ ಭಟ್, ಸಜಿಪ ಗುತ್ತು ಕೋಚ್ ಬಂಡಾರಿ ಯಾನೆ ಮುಂಡಪ ಶೆಟ್ಟಿ, ಪಾ ಲೆ ಮಂಟಪ ಗುತ್ತು, ಕಾಂತಾ ಡಿ ಗುತ್ತು, ಬಿಜಾಂದರ್ ಗುತ್ತು, ಮಾಡದಾರ ಗುತ್ತು, ನಗ್ರಿ ಗುತ್ತು ಪ್ರಮುಖರಾದ ವಿವೇಕ್ ಶೆಟ್ಟಿ ನಗ್ರಿ ಗುತ್ತು, ರೋಹಿತ್ ಶೆಟ್ಟಿ ನಗ್ರಿ ಗುತ್ತು, ಶ್ರೀಕಾಂತ್ ಶೆಟ್ಟಿ, ದೇವಿ ಪ್ರಸಾದ್ ಪೂಂಜಾ, ಸಂಕೇಶ, ಕೋಚು ಪೂಜಾರಿ, ಕುಂಛ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.