ಬಂಟ್ವಾಳ: ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಸುಳ್ಳಮಲೆ ಬೆಟ್ಟದಲ್ಲಿರುವ ಕೆರೆಗಳ ಅಭಿವೃದ್ಧಿಯ ಸಲುವಾಗಿ ಊರಿನ ಪ್ರಮುಖರ, ಜನಪ್ರತಿನಿಧಿಗಳ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಹಾಗೂ ಗ್ರಾಮಸ್ಥರ ಸಭೆಯನ್ನು ಮಾಣಿ ಗ್ರಾಮದ ಶಂಭುಗ ಬಾಲಮಂಟಮೆಯಲ್ಲಿ ನಡೆಸಲಾಯಿತು.

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಸಚಿನ್ ರೈ ಮಾಣಿಗುತ್ತು, ಅರೆಬೆಟ್ಟುಗುತ್ತು ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿಯವರ ಉಪಸ್ಥಿತಿಯಲ್ಲಿ ಜರಗಿದ ಈ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಇವರು ಸುಳ್ಳಮಲೆ ಬೆಟ್ಟದಲ್ಲಿರುವ ಕೆರೆಗಳ ಹೂಳೆತ್ತುವ ಕೆಲಸಕಾರ್ಯಗಳನ್ನು ನಡೆಸುವರೇ ರಾಜ್ಯ ಸರಕಾರದ ಅರಣ್ಯ ಇಲಾಖೆಯಿಂದ ಸುತ್ತೋಲೆ ಮಾಣಿ ಗ್ರಾಮ ಪಂಚಾಯತ್ ಗೆ ಬಂದಿದ್ದು, ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಣಯಿಸಲಾಗಿದೆ. ಇಲಾಖೆಯ ನಿಯಮವನ್ನು ಅನುಸರಿಸುವ ಜೊತೆಗೆ ಊರಿನವರೆಲ್ಲರ ಸಹಕಾರದಿಂದ ಈ ಕೆಲಸವನ್ನು ನಿರ್ವಹಿಸಲು, ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿಕೊಂಡರು.

ಸುಳ್ಳಮಲೆ ಬೆಟ್ಟಕ್ಕೆ ಧಾರ್ಮಿಕ ಪರಂಪರೆಯೊಂದಿಗೆ ಪೌರಾಣಿಕವಾದ ಹಿನ್ನೆಲೆಯಿದೆ. ಕೆರೆಗಳ ಅಭಿವೃದ್ಧಿಯ ದೃಷ್ಟಿಯಿಂದ ಧಾರ್ಮಿಕ ಚಿಂತನೆ ಆಗಬೇಕು ಮತ್ತು ಗ್ರಾಮ ದೈವಗಳ ಅಭಯದ ಪ್ರಕಾರ ಈ ಕಾರ್ಯಕ್ಕೆ ಮುಂದಿನ ಹೆಜ್ಜೆಯನ್ನು ಇಡಬೇಕು ಎನ್ನುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ಮೂಡಿ ಬಂತು.

ಊರಿನ ಪ್ರಮುಖರಾದ ತಿರುಮಲ ಕುಮಾರ್ ಮಜಿ ಮನೆ, ಜಗನ್ನಾಥ ಚೌಟ ಬದಿಗುಡ್ಡೆ, ಸಂದೀಪ್ ಶೆಟ್ಟಿ ಅರೆಬೆಟ್ಟು, ಸುಧೀರ್ ಕುಮಾರ್ ಶೆಟ್ಟಿ ಬನ್ನೂರು ಗುತ್ತು, ಮಹಾಬಲ ಶೆಟ್ಟಿ ವಾರಾಟ, ರಾಜೀವ ಶೆಟ್ಟಿ ವಾರಾಟ, ಸೀತಾರಾಮ ಶೆಟ್ಟಿ ಶಂಭುಗ, ತಮ್ಮಣ್ಣ ಶೆಟ್ಟಿ ಶಂಭುಗ, ಜನಾರ್ದನ ಪೂಜಾರಿ ಬಾಯಿಲ, ಗಣೇಶ್ ರೈ ಸಾಗು, ಜಗದೀಶ್ ಜೈನ್ ಮಾಣಿ, ಹರಿಯಪ್ಪ ಮೂಲ್ಯ ನೆಲ್ಲಿ, ಜತ್ತಪ್ಪ ಮೂಲ್ಯ ಪಲ್ಲತ್ತಿಲ, ಸಂಜೀವ ಮೂಲ್ಯ ಬಂಗುಲೆ, ಗೋಪಾಲ ಮೂಲ್ಯ ನೆಲ್ಲಿ, ಲೋಕೇಶ್ ಪೂಜಾರಿ ಪಲ್ಲತ್ತಿಲ, ಸುಧಾಕರ ಶೆಟ್ಟಿ ಶಂಭುಗ, ಭರತ್ ಶೆಟ್ಟಿ ಹಳಿರ, ಮಾಣಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರುಗಳಾದ ಸುದೀಪ್ ಕುಮಾರ್ ಶೆಟ್ಟಿ, ನಾರಾಯಣ ಶೆಟ್ಟಿ ತೋಟ, ಇಬ್ರಾಹಿಮ್.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಸುಜಾತಾ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here