ಮಂಗಳೂರು: ಇಲ್ಲಿನ ಹೊರ ವಲಯದ ಸೆಝ್ ಪ್ರದೇಶದಲ್ಲಿರುವ ಕ್ಯಾಟಸಿಂತ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಇದು ಪ್ರೆಟ್ರೋಲಿಯಂ ಉತ್ಪನ್ನಗಳ ಕಂಪನಿಯಾಗಿದ್ದು ಸ್ಫೋಟದ ಬಳಿಕ ಕಂಪೆನಿಯ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದೆ. ಇದರಿಂದ ಸ್ಥಳೀಯರಲ್ಲಿ ಕೆಲವು ಕಾಲ ಆತಂಕ ಮನೆ ಮಾಡಿತು.
ಸಿಲಿಂಡರ್ ಸ್ಫೋಟಗೊಂಡ ವೇಳೆ ಕಂಪನಿಯಲ್ಲಿರುವ ಸಿಬ್ಬಂದಿಗಳು ಊಟಕ್ಕೆ ತೆರಳಿದ್ದರಿಂದ ಭಾರೀ ಅವಘಡ ತಪ್ಪಿದ್ದು ಎಲ್ಲಾ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಸ್ಥಳದಲ್ಲಿ ಮಂಗಳೂರು, ಕದ್ರಿ, ಎಚ್ಪಿಸಿಎಲ್, ಎನ್‌ಎಂಪಿಟಿ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.