ಬಂಟ್ವಾಳ: ಸಜಿಪಮೂಡ ಗ್ರಾಮದ ಅಣ್ಣಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ನೂತನ ಕಾಂಕ್ರೀಟ್ ರಸ್ತೆಗೆ ಗುರುವಾರ ಶಿಲಾನ್ಯಾಸ ನೆರವೇರಿಸಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಈ ರಸ್ತೆ ನಿರ್ಮಾಣಕ್ಕೆ ಅಂದಾಜು 20 ಲಕ್ಷ ರೂಪಾಯಿ ಸರಕಾರದಿಂದ ಮಂಜೂರು ಮಾಡಿದ್ದಾರೆ.
ಭೂಮಿ ಪೂಜೆಯ ಧಾರ್ಮಿಕ ವಿಧಿವಿಧಾನಗಳನ್ನು ಸಜೀಪ ಮಾಗಣೆಯ ತಂತ್ರಿ ಎಂ.ಸುಬ್ರಮಣ್ಯ ಭಟ್ ನೆರವೇರಿಸಿದರು. ಶಿಲಾನ್ಯಾಸವನ್ನು ಜಿಲ್ಲಾ ಪಂಚಾಯತ್ ಸದಸ್ಯ ಕೆ.ರವೀಂದ್ರ ಕಂಬಳಿ ನೆರವೇರಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ, ನಂದಾವರ ಕ್ಷೇತ್ರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್, ಶ್ರೀಕಾಂತ್ ಶೆಟ್ಟಿ ಸಂಕೇಶ, ಸಜಿಪಮೂಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದೇವಿಪ್ರಸಾದ್ ಪೂಂಜಾ ಹಾಗೂ ಕೆ ವಿಶ್ವನಾಥ್ ಬೆಲ್ಚಡ. ಸುರೇಶ್ ಪೂಜಾರಿ ಸರ್ ತಾವು. ಲಿ oಗಪ್ಪ ದೋಟ. ರಮೇಶ್. ಕೂಸೇಶ್, ನಿತಿನ್ ಆರಸ, ವಿಶ್ವನಾಥ್ ಕೊಟ್ಟಾರಿ, ರತ್ನಾಕರ ನಾಡಾರ ಮೊದಲಾದವರು ಉಪಸ್ಥಿತರಿದ್ದರು.