ಬಂಟ್ವಾಳ: ಬಂಟ್ವಾಳ ತಾ. ರಾಯಿ ಗ್ರಾಮದ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಸದಾನಂದ ಗೌಡ ಮತ್ತಾವು ಅವರು ಆಯ್ಕೆಯಾಗಿದ್ದಾರೆ.
ಸದಾನಂದ ಗೌಡ ಅವರು ರಾಯಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದು, ವಿವಿಧ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ, ರಾಯಿ ಶ್ರೀ ಮಹಾಲಿಂಗೇಶ್ವರ ಬಾಲ ಯಕ್ಷಗಾನ ಮಂಡಳಿ ಸಂಚಾಲಕರಾಗಿದ್ದಾರೆ.
ರಾಮಚಂದ್ರ ಭಟ್ (ಅರ್ಚಕರು),ಮೋನಪ್ಪ ನಾಯ್ಕ, ಇಂದಿರಾ ಎಂ.ಬಂಗೇರ, ಹೇಮಾ ಎಚ್. ರಾವ್, ರಾಘವ ಅಮೀನ್, ಬಿ.ವಿಶ್ವನಾಥ, ಪರಮೇಶ್ವರ ಪೂಜಾರಿ, ದಿನೇಶ್ ಭಟ್ ಅವರು ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.