ಇಂದಿನಿಂದ ರಂಜಾನ್ ಉಪವಾಸ ಆರಂಭವಾಗುತ್ತಿದ್ದು, ಒಂದು ತಿಂಗಳ ಕಾಲ ಈ ಆಚರಣೆ ಇರಲಿದ್ದು, ಕೊರೊನಾ ಸೋಂಕು ಹೆಚ್ಚುತಿರುವ ಹಿನ್ನೆಲೆಯಲ್ಲಿ ರಂಜಾನ್ ಆಚರಣೆಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ರಂಜಾನ್ ಹೊಸ ಗೈಡ್ ಲೈನ್ ಪ್ರಮುಖ ಅಂಶಗಳು:
ಕಂಟೈನ್ ಮೆಂಟ್ ಜೋನ್ ನಲ್ಲಿರುವ ಮಸೀದಿಗಳನ್ನು ತೆರೆಯುವಂತಿಲ್ಲ. ಈ ಬಾರಿಯೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಿಲ್ಲ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಎರಡು ಮೀಟರ್ ನಷ್ಟು ಅಂತರ ಕಾಪಾಡಬೇಕು.
ಮನೆಯಲ್ಲಿಯೇ ಇಫ್ತಾರ್ ಕೂಟ ಆಯೋಜಿಸಬಹುದು. ಸಾರ್ವಜನಿಕವಾಗಿ ಇಫ್ತಾರ್ ನಡೆಸಬಾರದು. ಮಸೀದಿಗೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಬೇಕು. ಪ್ರಾರ್ಥನೆಗೆ ಸ್ವಂತ ಜಮಖಾನ ಮಾತ್ರ ಬಳಸಬೇಕು ಎಂಬಿತ್ಯಾದಿ ನಿಯಮಗಳನ್ನು ರಾಜ್ಯ ಸರ್ಕಾರ ರೂಪಿಸಿದೆ.
ಕಳೆದ ವರ್ಷವೂ ಕೋವಿಡ್ ಕಾರಣದಿಂದ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಸಾಮೂಹಿಕ ಪ್ರಾರ್ಥನೆಗೆ ಕಳೆದ ವರ್ಷವೂ ಅವಕಾಶ ನೀಡಿರಲಿಲ್ಲ.