ಬಂಟ್ವಾಳ: ಸಾಮೂಹಿಕ ವಿವಾಹದ ಮೂಲಕ ಅನೇಕ ಬದುಕಿಗೆ ಆಸರೆಯಾಗಿ , ಹೆಣ್ಣು ಮಕ್ಕಳ ಕಣ್ಣೀರೊರೆಸುವ ಮಾದರಿ ಮತ್ತು ಪುಣ್ಯದ ಕೆಲಸವನ್ನು ತುಂಗಪ್ಪ ಬಂಗೇರ ಅವರು ಮಾಡುತ್ತಿದ್ದಾರೆ ಎಂದು ತುಳು ಸಾಹಿತ್ಯ ಅಕಾಡೆಮಿ ಮಲ್ಲಿಕಾ ಶೆಟ್ಟಿ ಅವರು ಹೇಳಿದರು.
ಅವರು ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಎ.25 ರಂದು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ) ಪುಂಜಾಲಕಟ್ಟೆ ಇವರ ವತಿಯಿಂದ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯುವ 13 ನೇ ವರ್ಷದ ಸಾಮೂಹಿಕ ವಿವಾಹದ ಮುಂಚಿತವಾಗಿ ಪುಂಜಾಲಕಟ್ಟೆ ಸುವಿಧಾ ಸಹಕಾರಿ ಸಂಘದಲ್ಲಿ ನಡೆದ ಸಾಮೂಹಿಕ ನಿಶ್ಚಿತಾರ್ಥದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕುವ ತುಂಗಪ್ಪ ಬಂಗೇರ ಅವರ ಉದ್ದೇಶ ಈ ಸಾಮೂಹಿಕ ವಿವಾಹದ ಮೂಲಕ ಈಡೇರಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ತಾಲೂಕು ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಧೂವರರಿಗೆ ಧಾರಾ ವಸ್ತ್ರ ವಿತರಣೆ ನಡೆಸಿ ಮಾತನಾಡಿದ ಕರ್ನಾಟಕ ನೀರು ಸರಬರಾಜು ಮತ್ತು
ಒಳಚರಂಡಿ ಮಂಡಳಿಯ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್
ಮದುವೆಗಳು ಎರಡು ಕುಟುಂಬಗಳ ಹಿರಿಯರ ಆಶೀರ್ವಾದದಿಂದ ನಡೆದಾಗ ಪರಿಪೂರ್ಣವಾಗಿರುತ್ತದೆ ಎಂದು ಹೇಳಿದರು.
ನೇರ ನಡೆನುಡಿಯ ವಿಭಿನ್ನ ರೀತಿಯ ರಾಜಕಾರಣಿ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಅವರು ಹೇಳಿದರು.
ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿಕಂಬಳಿ ಅವರು ವಧೂವರರಿಗೆ ಧಾರಾವಸ್ತ್ರ ವಿತರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಸ್ವಸ್ತಿಕ್ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಸಾಮೂಹಿಕ ವಿವಾಹದ ರೂವಾರಿ ಎಂ.ತುಂಗಪ್ಪ ಬಂಗೇರ ಅವರು ಬಡತನ
ಬಿಟ್ಟು ಸಮಾನವಾದ ರೀತಿಯಲ್ಲಿ ಬದುಕನ್ನು ಕಂಡುಕೊಳ್ಳಲು ಪ್ರಯತ್ನಿಸೋಣ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಇರ್ವತ್ತೂರು ಗ್ರಾ.ಪಂ.ಅಧ್ಯಕ್ಷ ಶೇಖರ್, ಉದ್ಯಮಿ ಹೇಮಂತ್ ಕುಮಾರ್, ಮುರುಗೇಂದ್ರ ಮಿತ್ರಮಂಡಳಿಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ವಾಮದಪದವು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಆಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ, ಉದ್ಯಮಿ ಪ್ರಶಾಂತ್ ಪ್ರತಿಮಾ ಮಡಂತ್ಯಾರು,
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂಚಾಲಕ ರಾಜೇಶ್ ಪಿ.ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲಾ ಪಿ. ಸಮಿತಿಯ ಪ್ರಮುಖರದಾ ರಂಜಿತ್ .ಎಚ್ .ಡಿ. ಅಮೃತಾ, ವಿವಾಹದ ಮುಂಚಿತವಾಗಿ ಮಾಡಿದ ನಿಶ್ಚಿತಾರ್ಥ ನಡೆಸಿಕೊಟ್ಟ ಗುರಿಕಾರರುಗಳಾದ ಗಂಗಾಧರ ಪೂಜಾರಿ ಅಂಬಡೆಬೈಲು, ಗಿರೀಶ್ ಪೂಜಾರಿ ಹೆಗ್ಡೆಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಪ್ರಭಾಕರ ಪಿ.ಎಂ.ಸ್ವಾಗತಿಸಿ ವಂದಿಸಿದರು.
ದೇವದಾಸ ಅಬೂರ ಕಾರ್ಯಕ್ರಮ ನಿರೂಪಿಸಿದರು.