ಪುಂಜಾಲಕಟ್ಟೆ: ಪ್ರಾಥಮಿಕ ಆರೋಗ್ಯ ಕೇಂದ್ರ ಪುಂಜಾಲಕಟ್ಟೆ, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಮತ್ತು ಶ್ರೀರಾಮ ಯುವಕ ಸಂಘ ನೈನಾಡು ಇದರ ಸಹಯೋಗದೊಂದಿಗೆ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ನಯನಾಡು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸೋಹನ್ ಕುಮಾರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ, ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಹೆಗ್ಡೆ, ಪಂಚಾಯತ್ ಸದಸ್ಯರಾದ ನೆಲ್ವಸ್ಟರ್ ಪಿಂಟೊ, ಶ್ರೀರಾಮ ಯುವಕ ಸಂಘದ ಅಧ್ಯಕ್ಷ ಶೇಖರ್ ನಿನ್ನಿಕಲ್ಲು, ಹರೀಶ್ ಶೆಟ್ಟಿ ಸಿರಿಮನೆ, ಆರೋಗ್ಯ ಕಾರ್ಯಕರ್ತೆಯರಾದ ಶಮೀಳಾ ಪಿ.ವೈ., ನಿಶ್ಮಿತಾ, ಆಶಾ ಕಾರ್ಯಕರ್ತೆಯರಾದ ಪ್ರಮಿಳಾ, ಭವ್ಯಾ, ಅಂಗನವಾಡಿ ಕಾರ್ಯಕರ್ತೆ ಅನಿತಾ ಕ್ರಾಸ್ತಾ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 45 ವರ್ಷ ಮೇಲ್ಪಟ್ಟ 65 ಮಂದಿ ಲಸಿಕೆಯನ್ನು ಪಡೆದರು.