ಬೆಳ್ತಂಗಡಿ: ನಾಗ ಪೋಜೆಯ ವೇಳೆ ಹಾಕಿದ ಹೊಗೆಯ ಪರಿಣಾಮ ಹೆಜ್ಜೇನು ಹಿಂಡು ದಾಳಿ ನಡೆಸಿದ್ದು ಇದರಿಂದ ಪೂಜೆಯಲ್ಲಿ ತೊಡಗಿದ್ದ ಎಂಟು ಮಂದಿ ಅಸ್ವಸ್ಥಗೊಂಡಿದ್ದಾರೆ.
ಈ ಘಟನೆ ಇಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಂಡಡ್ಕ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಅರುವಾಲು ಬಾಲಕೃಷ್ಣ ಎಂಬವರ ಮನೆಯಲ್ಲಿ ಇಂದು ಬೆಳಗ್ಗೆ ನಾಗಪೂಜೆ ನಡೆಯುತ್ತಿದ್ದಾಗ ಹೆಜ್ಜೇನು ದಾಳಿ ನಡೆಸಿದೆ.
ಪೂಜೆಯ ವೇಳೆ ಆವರಿಸಿದ್ದ ಹೊಗೆ ಹೆಜ್ಜೇನು ಗೂಡಿಗೆ ತಗಲಿದ್ದರಿಂದ ಭಾರೀ ಸಂಖ್ಯೆಯ ಹೆಜ್ಜೇನುಗಳು ಪೂಜೆಗೆ ಸೇರಿದ್ದ ಸುಮಾರು ಇಪ್ಪತೈದು ಮಂದಿಯ ಮೇಲೆ ದಾಳಿ ನಡೆಸಿದೆ. ಅವರಲ್ಲಿ ಎಂಟು ಮಂದಿ ಅಸ್ವಸ್ಥಗೊಂಡಿದ್ದರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.