ಬಂಟ್ವಾಳ: ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ ಪಿಂಕ್ ವಾಟ್ಸಾಪ್ ನ್ಯೂ ವರ್ಷನ್ ಹೆಸರಲ್ಲಿ ಲಿಂಕ್ ಹರಿದಾಡಿದ್ದು ಇದನ್ನು ಒತ್ತಿದ್ದವರು ಪೇಚಿಗೆ ಸಿಲುಕಿದ್ದಾರೆ.
ಪಿಂಕ್ ಬಣ್ಣದ ಸಿಂಬಲ್ ನೊಂದಿಗೆ ಪಿಂಕ್ ವಾಟ್ಸಾಪ್ ನ್ಯೂ ವರ್ಷನ್ ಹೆಸರಲ್ಲಿ ಲಿಂಕ್ ಹರಿದಾಡಿದೆ. ಈ ಲಿಂಕ್ ಒತ್ತಿದ ಕೂಡಲೆ ಈಗಾಗಲೇ ಸದಸ್ಯರಾಗಿರುವ ಗ್ರೂಪ್ ಗಳಿಗೆ ಮತ್ತು ವೈಯಕ್ತಿಕವಾಗಿ ಫಾರ್ವರ್ಡ್ ಆಗಿದೆ. ವಾಟ್ಸಾಪ್ ಹೊಸ ವರ್ಷನ್ ಬಂದಿರಬಹುದೆAದು ಈ ಲಿಂಕ್ ಒತ್ತಿದ್ದವರು ಬೇಸ್ತು ಬಿದ್ದಿದ್ದಾರೆ.
ಇದೊಂದು ವೈರಸ್ ಲಿಂಕ್ ಆಗಿದ್ದು ಒಂದು ಸಲ ಒತ್ತಿದರೆ ಸಾವಿರಾರು ಮಂದಿಗೆ ಸೆಂಡ್, ಫಾರ್ವರ್ಡ್ ಆಗಿದೆ. ಬಹುತೇಕ ವಾಟ್ಸಾಪ್ ಗ್ರೂಪ್ ಗಳಲ್ಲಿ ಇಂತಹ ಸಂದೇಶಗಳು ಹರಿದಾಡಿದ್ದು, ಕ್ಲಿಕ್ ಮಾಡಿದವರ ಮೊಬೈಲ್ ನಿಂದ ಫಾರ್ವರ್ಡ್ ಆಗಿದೆ. ಇದರಿಂದಾಗಿ ಹಲವರು ಮುಜುಗರಕ್ಕೆ ಒಳಗಾಗಿದ್ದಾರೆ. ಸಂದೇಶ ಡಿಲಿಟ್ ಮಾಡುವಂತೆ ತಿಳಿಸಿದ್ದು, ಕೆಲವರಿಗೆ ಡಿಲಿಟ್ ಮಾಡಲು ಕೂಡ ಸಾಧ್ಯವಾಗಿಲ್ಲ. ಕೆಲವರು ಗ್ರೂಪ್ ಗಳಿಂದಲೇ ಹೊರ ಬಂದರೆ, ಮತ್ತೆ ಕೆಲವರು ಆಪ್ ಡಿಲಿಟ್ ಮಾಡಿಬಿಟ್ಟಿದ್ದಾರೆ.
ಇನ್ನೊಂದೆಡೆ ಈ ಲಿಂಕ್ ಅನ್ನು ಒತ್ತದಂತೆ ಮನವಿ ಮಾಡಿದ ಸಂದೇಶಗಳು ವಾಟ್ಸಾಪ್‌ನಲ್ಲಿ ನಿನ್ನೆಯಿಂದ ಹರಿದಾಡುತ್ತಿದೆ.
ಲಿಂಕ್ ಓಪನ್ ಮಾಡಿ ಯಾರಿಗಾದರೂ ಸಮಸ್ಯೆ ಆಗುತ್ತಿದ್ದರೆ ಹೀಗೆ ಮಾಡಿ
1.Settings – Apps ಗೆ ಹೋಗಿ ಹೊಸ ಪಿಂಕ್ ಬಣ್ಣದ WhatsApp ಆ್ಯಪ್ download ಆಗಿದ್ದನ್ನು ಹುಡುಕಿ uninstall ಮಾಡಿ.
2. Browser tab ನಲ್ಲಿ ಇರುವುದನ್ನ ರಿಮೂವ್ ಮಾಡಿ.
3. Cache ಮೆಮೊರಿ ಡಿಲೀಟ್ ಮಾಡಿ.
4. ಮೊಬೈಲ್ restart ಮಾಡಿ.