ಬಂಟ್ವಾಳ : ಬೈಲು ಮೂಡುಕರೆ ದಿ.ಸರೋಜಿನಿ ಮಾರ್ತ ಮತ್ತು ನಡ್ಚಾಲುಗುತ್ತು ದಿ. ಸದಾನಂದ ಮಾರ್ತ ಇವರ ಪುತ್ರ ಬೈಲು ಮೂಡುಕರೆ ದಿಲೀಪ್ ಮಾರ್ತರವರು (65 ವರ್ಷ) ದಿ.11/04/2021ನೇ ಆದಿತ್ಯವಾರ ಅಲ್ಪಕಾಲದ ಅನಾರೋಗ್ಯದಿಂದ ದೈವಾ ಧೀನರಾಗಿರುತ್ತಾರೆ.ಇವರು ವೀರಕಂಭ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ವಲಯ ಅರಣ್ಯ ಸಂರಕ್ಷಣ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಮಾಜಸೆವಕರಾಗಿ ಜನಾನುರಾಗಿಯಾಗಿದ್ದರು.ಮೃತರು ಪತ್ನಿ,ಇಬ್ಬರು ಪುತ್ರರು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ