ಮುಂಬೈ: ಒಂದೆಡೆ ದೇಶದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದಂತೆ ಇನ್ನೊಂದೆಡೆ ಸೋಂಕಿತರಿಗೆ ಮುಖ್ಯವಾಗಿ ಬೇಕಾಗಿರುವ ಆಕ್ಸಿಜನ್ ಕೊತರೆಯಿಂದ ದೇಶ ಬಳಲುತ್ತಿದೆ. ಈ ನಡುವೆ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ಟ್ಯಾಂಕ್‌ನಿದ ಆಕ್ಸಿಜನ್ ಸೋರಿಕೆಯಾಗಿದ್ದು 11 ಜನರು ಮೃತಪಟ್ಟಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪ್, ಆಸ್ಪತ್ರೆಯ ಆಕ್ಸಿಜನ್ ಟ್ಯಾಂಕ್‌ಗೆ ಟ್ಯಾಂಕರ್‌ನಿದ ಆಕ್ಸಿಜನ್ ತುಂಬಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳದ ರಕ್ಷಣಾ ತಂಡ ಸ್ಥಳದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಆಕ್ಸಿಜನ್ ಟ್ಯಾಂಕ್‌ನ ಕವಾಟ ತೆರೆದ ಪರಿಣಾಮ ಆಕ್ಸಿಜನ್ ಸೋರಿಕೆಯಾಗಿದೆ. ತೆರೆದಿದ್ದ ಕವಾಟವನ್ನು ಮುಚ್ಚಲಾಗಿದೆ. ಆದರೂ ಸಾಕಷ್ಟು ಆಮ್ಲಜನಕ ಸೋರಿಕೆಯಾಗಿದೆ. ಆಸ್ಪತ್ರೆಯಲ್ಲಿ ಸುಮಾರು 171 ರೋಗಿಗಳು ಆಮ್ಲಜನಕವನ್ನ ಹೊಂದಿದ್ದರು. ಅವರಲ್ಲಿ 11 ಮಂದಿ ರೋಗಿಗಳು ಮೃತಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆಯೊದು ವರದಿ ಮಾಡಿದೆ.