ಬಂಟ್ವಾಳ : ವಿದೇಶಿ ಸಂಸ್ಕøತಿಯಿಂದ ಪ್ರಭಾವಿತರಾಗಿ ಎಪ್ರಿಲ್ ಫೂಲ್ ಡೇ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬೇಸಗೆಯ ಬಿಸಿಯನ್ನು ತಂಪಾಗಿಸಲು ನಾವು ಗಿಡಗಳನ್ನು ನೆಟ್ಟು ಬೆಳೆಸುವುದೇ ಪರಿಹಾರವೆಂಬ ಉದ್ದೇಶವನ್ನಿಟ್ಟುಕೊಂಡು ಎಪ್ರಿಲ್ ಕೂಲ್ ಡೇ ಎಂಬ ಹೊಸ ಪ್ರಯತ್ನ ತೆಂಕಿಲದ ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರೂಪಲೇಖ ರವರು ಮಾತನಾಡಿ ನಾವಿಂದು ಜಾಲತಾಣಗಳಲ್ಲಿ ಸಂದೇಶಗಳನ್ನು ಹಂಚುವುದರ ಜೊತೆಗೆ ಸಂಸ್ಥೆಯ ಅಳಿಲ ಸೇವೆ ಇದಾಗಿದೆ ಎಂದರು.
ಮುಖ್ಯ ಅಭ್ಯಾಗತರಾದ ಕಾಲೇಜಿನ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾದ ರಾಜಗೋಪಾಲ ಪ್ರಭುಗಳು ಮಾತನಾಡಿ ಇನ್ನೊಬ್ಬರನ್ನು ಮೂರ್ಖ ರನ್ನಾಗಿಸಿ ಸಂತೋಷಪಡುವುದರಲ್ಲಿ ಯಾವುದೇ ಆದರ್ಶವಿಲ್ಲ. ಇಂತಹ ಕಾರ್ಯಕ್ರಮಗಳಿಂದ ವಾತಾವರಣವನ್ನು ತಂಪಾಗಿಸುವ ಮಹಾತ್ಕಾರ್ಯವಾಗುತ್ತದೆ.
ಕಾರ್ಯಕ್ರಮದಲ್ಲಿ ಸಂಚಾಲಕರಾದ ಶ್ರೀಕಾಂತ ಕೊಳತ್ತಾಯ, ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ , ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕರಾದ ಶ್ರೀನಾಥ ಹಾಗೂ ಕಾಲೇಜಿನ ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಎಲ್ಲರ ಸಹಕಾರದೊಂದಿಗೆ ಕಾಲೇಜಿನ ಪರಿಸರದಲ್ಲಿ ಹಲವು ಜಾತಿಯ ಗಿಡಗಳನ್ನು ನೆಟ್ಟರು.