Thursday, October 19, 2023

ಮೂಡುಪಡುಕೋಡಿ: ಉಚಿತ ಕೋವಿಡ್ ಲಸಿಕಾ ಉತ್ಸವ

Must read

ಬಂಟ್ವಾಳ: ಪ್ರಾಥಮಿಕ ಆರೋಗ್ಯ ಕೆಂದ್ರ ಪುಂಜಾಲಕಟ್ಟೆ ಇದರ ಸಹಯೋಗದೊಂದಿಗೆ ಶಾರದೋತ್ಸವ ಸೇವಾ ಸಮಿತಿ ಇರ್ವತ್ತೂರುಪದವು, ಶ್ರೀ.ಕ್ಷೇ.ಧ.ಗ್ರಾ.ಯೋ.(ರಿ) ಬಂಟ್ವಾಳ ಇರ್ವತ್ತೂರು ಒಕ್ಕೂಟ, ಒಡಿಯೂರು ಶ್ರೀ.ಗ್ರಾ. ವಿ.ಯೋ. ಇರ್ವತ್ತೂರು ಘಟ ಸಮಿತಿ, ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಮೂಡುಪಡುಕೋಡಿ ಶಾಲೆ ಇದರ ಜಂಟಿ ಆಶ್ರಯದಲ್ಲಿ ಉಚಿತ ಕೋವಿಡ್ ಲಸಿಕಾ ಉತ್ಸವ ಸ.ಹಿ.ಪ್ರಾ. ಶಾಲೆ ಮೂಡುಪಡುಕೋಡಿ ಶಾಲಾ ವಠಾರದಲ್ಲಿ ಗುರುವಾರ ನಡೆಯಿತು.

ಕಾರ್ಯಕ್ರಮವನ್ನು ಸಂಗಬೆಟ್ಟು ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಇರ್ವತ್ತೂರು ಗ್ರಾ.ಪಂ. ಅಧ್ಯಕ್ಷ ಎಂ.ಪಿ.ಶೇಖರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಿಲತ್ತಬೆಟ್ಟು ಸಹಕಾರಿ ಸಂಘದ ನಿರ್ದೇಶಕ ಬೂಬ ಸಪಲ್ಯ ಮುಂಡಬೈಲು, ಇರ್ವತ್ತೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.,ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಸೇವಾ, ಒಡಿಯೂರು ಶ್ರೀ.ಗ್ರಾ.ವಿ.ಯೋ. ಇರ್ವತ್ತೂರು ಸಂಯೋಜಕ ಶ್ರೀಮತಿ ವಿಜಯ, ಶಾರದೋತ್ಸವ ಸಮಿತಿಯ ಅಧ್ಯಕ್ಷ ಡಾ. ರಾಮಕೃಷ್ಣ ಎಸ್.ಆಶಾ, ಕಾರ್ಯಕರ್ತೆರಾದ ನಳಿನಿ ಸೇವಾ ಹಾಗೂ ಅರುಂಧತಿ ಸೇವಾ, ಉಪಸ್ಥಿತರಿದ್ದರು.

ಪುಂಜಾಲಕಟ್ಟೆ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಸಂಧ್ಯಾ ಕೊವಿಡ್ ಲಸಿಕೆಯ ಬಗ್ಗೆ ಮಾಹಿತಿ ನೀಡಿದರು. ಶಂಕರ್ ಶೆಟ್ಟಿ ಬೆದ್ರಮಾರ್ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ದಯಾನಂದ ಎಸ್.ಎರ್ಮೆನಾಡು ನಿರೂಪಿಸಿ ವಂದಿಸಿದರು.

More articles

Latest article