ದೆಹಲಿ: ಇದೇ ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ೨ ಗಂಟೆಯ ವರೆಗೆ ಆನ್‌ಲೈನ್‌ನಲ್ಲಿ ಹಣವನ್ನು ವರ್ಗಾಹಿಸುವ ಆರ್‌ಟಿಜಿಎಸ್ ಸೌಲಭ್ಯ ಲಭ್ಯವಿರುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ.
ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಆರ್‌ಬಿಐ ಈ ಕ್ರಮ ತೆಗೆದಿದೆ. ಆರ್‌ಬಿಐನ ಮುಖ್ಯ ವ್ಯವಸ್ಥಾಪಕ ಯೋಗೇಶ್ ದಯಾಲ್, ಏ.೧೭ರ ಮಧ್ಯರಾತ್ರಿಯಿಂದ ಏ.೧೮ರ ೨ ಗಂಟೆಯ ವರೆಗೆ ಆರ್‌ಟಿಜಿಎಸ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಳಿಕ ಈ ವ್ಯವಸ್ಥೆ ಎಂದಿನAತೆ ಮುಂದುವರೆಯಲಿದೆ. ಆ ದಿನ ಹಣ ವರ್ಗಾವಣೆಗೆ ಪರ್ಯಾಯ ವ್ಯವಸ್ಥೆ ಮಾಡಲು ಗ್ರಾಹಕರಿಗೆ ಸಲಹೆ ನೀಡುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಮನವಿ ಮಾಡಿದೆ.