ಬಂಟ್ವಾಳ: ತಾಲೂಕು ಸರಕಾರಿ ಆಸ್ಪತ್ರೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬುಧವಾರ ಭೇಟಿ ನೀಡಿ ಕೊರೋನ ಚಿಕಿತ್ಸೆಯ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ ಕೊರೋನಾ ರೋಗಿಗಳಿಗೆ ಮೀಸಲಿರುವ ಬೆಡ್, ಆಕ್ಸಿಜನ್, ಔಷಧಿ ವ್ಯವಸ್ಥೆಯ ಬಗ್ಗೆ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುಷ್ಪಲತಾ ಅವರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಯುವಮೋರ್ಚಾದ ಸುದರ್ಶನ್ ಬಜ, ಪ್ರದೀಪ್ ಅಜ್ಜಿಬೆಟ್ಟು, ಪಂಚಾಯತ್ ಸದಸ್ಯ ಕಾರ್ತಿಕ್ ಬಳ್ಳಾಲ್ ಉಪಸ್ಥಿತರಿದ್ದರು.