Thursday, October 26, 2023

ಬಿ.ಸಿ.ರೋಡ್: ಮೈಕ್ ಮೂಲಕ ಮಿನಿವಿಧಾನ ಸೌಧದಲ್ಲಿ ಕೋವಿಡ್ ಜಾಗೃತಿ

Must read

ಬಂಟ್ವಾಳ: ಕೋವಿಡ್ ವೈರಸ್ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಮಿನಿ ವಿಧಾನ ಸೌಧದಲ್ಲಿ ಮೈಕ್ ಅಳವಡಿಸಿ ಪರಿಸರಕ್ಕೆ ಕೇಳುವಂತೆ ಜಾಗೃತಿ ಮೂಡಿಸುವ ಘೋಷಣೆಯನ್ನು ಬಂಟ್ವಾಳ ತಾಲೂಕು ಆಡಳಿತದಿಂದ ಮಾಡಲಾಗುತ್ತಿದೆ.

ತಾಲೂಕಿನ ನಾಗರಿಕರಿಗೆ ಬಂಟ್ವಾಳ ತಾಲೂಕು ಆಡಳಿತದ ಪ್ರಕಟನೆ. ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಸರಕಾರದ ಮಾರ್ಗಸೂಚಿಯ ಪ್ರಕಾರ ಎಲ್ಲಾ ನಿರ್ದೇಶನಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕಾಗಿ ಈ ಮೂಲಕ ವಿನಂತಿಸುತ್ತೇವೆ. ಸಾರ್ವಜನಿಕರು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುವುದು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಗುಂಪು ಗುಂಪಾಗಿ ಸೇರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಮೈಕ್‌ನಲ್ಲಿ ಘೋಷಿಸಲಾಗುತ್ತಿದೆ.

ಅಂಗಡಿ ಮಾಲಕರು ಅಂಗಡಿಗೆ ಬರುವ ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಬೇಕು. ಗ್ರಾಹಕರು ಮಸ್ಕ್ ಧರಿಸದಿದ್ದರೆ ಅಂಗಡಿ ಮಾಲಕರಿಗೆ ದಂಡ ವಿಧಿಸುವುದರ ಜೊತೆಗೆ ಉದ್ದಿಮೆ ಪರವಾನಿಗೆಯನ್ನು ರದ್ದು ಮಾಡಲಾಗುವುದು. ಸ್ಯಾನಿಟೈಸರ್ ಬಳಸುವಂತೆ ಗ್ರಾಹಕರಿಗೆ ಸೂಚಿಸಿ. ಸರಕಾರದ ನಿಯಮದಂತೆ ಮುಂಜಾಗೃತೆಯನ್ನು ಪಲಿಸಿ.

45 ವರ್ಷ ಮೇಲಿನವರಿಗೆ ಉಚಿತವಾಗಿ ಲಸಿಕೆ ಲಭ್ಯವಿದ್ದು ಕಡ್ಡಾಯವಾಗಿ ಲಸಿಕೆ ಪಡೆಯಿರಿ. 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಪಡೆಯುವ ಅವಕಾಶ ಇದೆ. ಲಸಿಕೆ ಪಡೆದು ಕೋವಿಡ್ ರೋಗದೊಂದಿಗೆ ಹೋರಾಡಲು ಹಾಗೂ ಬಂಟ್ವಾಳ ತಾಲೂಕನ್ನು ಕೋವಿಡ್ ಮುಕ್ತಗೊಳಿಸಲು ಸಾರ್ವಜನಿಕರು ತಾಲೂಕು ಆಡಳಿತದೊಂದಿಗೆ ಸಹಕಾರ ನೀಡಿ ಎಂದು ಮೈಕ್‌ನಲ್ಲಿ ಮನವಿ ಮಾಡಲಾಗುತ್ತಿದೆ.

More articles

Latest article