ಬಂಟ್ವಾಳ: ಬಂಟ್ವಾಳ ತಾ. ಕಾವಳಪಡೂರು ಗ್ರಾಮದ ಮಧ್ವ ಶ್ರೀ ಕೊಡಮಣಿತ್ತಾಯಿ ರಾಜನ್ ದೈವಸ್ಥಾನ ಇದರ ವಾರ್ಷಿಕ ನೇಮೋತ್ಸವ ಕಾರ್ಯಕ್ರಮ ಎ.4 ರಂದು ನಡೆಯಲಿದೆ.
ಬೆಳಗ್ಗೆ ಪ್ರಾರ್ಥನೆ, ಶಾರಿ ಹಾಕುವುದು, ಕೋಳಿಕುಂಟ, ಸಂಜೆ ಮಾಣಿಬೆಟ್ಟು ಗುತ್ತು ಮತ್ತು ಕಲ್ಕರಬೆಟ್ಟು ಗುತ್ತು ಮನೆಯಿಂದ ಭಂಡಾರ ಆಗಮಿಸಿ ರಾತ್ರಿ ಶ್ರೀದೈವಗಳಿಗೆ ನೇಮೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಸಂಜೆ ೪ ಗಂಟೆಯಿಂದ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.