ಕೊಡಗು: ಮಡಿಕೇರಿ ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 274ರಲ್ಲು ರಸ್ತೆ ಕುಸಿತ ಕಂಡುಬರುತ್ತಿದೆ. ಎರಡನೇ ಮೊಣ್ಣಂಗೇರಿ ಬಳಿ ರಸ್ತೆ ಬಹುತೇಕ ಕುಸಿತಗೊಂಡಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತು ಭಾರೀ ವಾಹನ ಸಂಚಾರದಿಂದ ಕೆಳ ಭಾಗದ ರಸ್ತೆಯಲ್ಲಿ ಕುಸಿತ ಕಾಣತೊಡಗಿದೆ. ಭಾರೀ ವಾಹನಗಳ ಸಂಚಾರ ಇನ್ನಷ್ಟು ಮುಂದುವರೆದಲ್ಲಿ ರಸ್ತೆ ಸಂಪೂರ್ಣ ಕಡಿತಗೊಳ್ಳುವ ಸಾಧ್ಯತೆಗಳಿದೆ.
ಈ ಹಿಂದೆಯೇ ದುರಸ್ತಿಗೊಂಡಿರುವ ಭಾಗದಲ್ಲಿ ಇದೀಗ ಮತ್ತೆ ಕುಸಿತ ಉಂಟಾಗುತ್ತಿರುವುದು ಆತಂಕ ಮೂಡಿಸಿದ್ದು ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗುತ್ತಿದೆ. ತ್ವರಿತವಾಗಿ ಮಾಡದಿದ್ದಲಿ ಮಡಿಕೇರಿ ಮಂಗಳೂರು ನಡುವೆ ಸಂಪರ್ಕ ಬಂದ್ ಆಗುವ ಸಾಧ್ಯತೆ ಇದೆ.