ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬವಾದ “ಈಸ್ಟರ್”ನ್ನು ಲೋರೆಟ್ಟೋ ಮಾತಾ ಚರ್ಚ್ ನಲ್ಲಿ ಬಹಳ ಭಕ್ತಿ, ಶ್ರದ್ಧೆ, ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಧನಾ ಗುರುಗಳಾಗಿ ಚರ್ಚ್ ಧರ್ಮಗುರುಗಳಗಿ ವಂ.ಫ್ರ್ರಾನ್ಸಿಸ್ ಕ್ರಾಸ್ತಾ , ವಂ. ಫೆಲಿಕ್ಸ್ ಲೋಬೊ . ವಂ ಜೋನ್ ಫೆರ್ನಾಂಡಿಸ್ ರವರು ನೆರೆದಿದ್ದ ನೂರಾರು ಭಕ್ತಾದಿಗಳೊಂದಿಗೆ ಬಲಿಪೂಜೆ ಅರ್ಪಿಸಿದರು. ವಂ. ಜೋನ್ ಫೆರ್ನಾಂಡಿಸ್ ರವರು ಯೇಸು ಕ್ರಿಸ್ತರ ಪುನರುತ್ಥಾನದ ಮಹತ್ವದ ಬಗ್ಗೆ ಪ್ರವಚನ ನೀಡಿದರು. ಪವಿತ್ರ ವಾರದ ಎಲ್ಲಾ ಪ್ರಾರ್ಥನಾ ವಿಧಿಯನ್ನು ಚರ್ಚ್ ಪಾಲನಾ ಮಂಡಳಿ ಮೆಲುಸ್ತುವರಿಯನ್ನು ವಹಿಸಿತ್ತು. ಕೊರೋನ
ಸೋಂಕಿನ ಸಂದರ್ಭದಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು , ಚರ್ಚ್ ಆವರಣದಲ್ಲಿ ದೊಡ್ಡ ಎಲ್ ಇ ಡಿ ಪರದೆ ಯನ್ನೂ ಅಳವಡಿಸಲಾಗಿತ್ತು.
ಸಂಬ್ರಮಾಚರಣೆಗೆ ಸಹಕರಿಸಿದ ಕೊಡುಗೈ ದಾನಿಗಳನ್ನು ಧರ್ಮಗುರುಗಳು ಅಲಂಕರಿಸಿದ ಮೇಣದ ಬತ್ತಿಗಳನ್ನು ನೀಡಿ ಗೌರವಿಸಿದರು. ಸಹಕರಿಸಿದ ಎಲ್ಲರನ್ನೂ ಕೃತಜ್ಞತ ಪೂರ್ವಕವಾಗಿ ಸ್ಮರಿಸಿದರು. ಬಲಿಪೂಜೆಗೆ ಹಾಜರಿದ್ದ ಭಕ್ತಾದಿಗಳಿಗೆ ಫಲಾಹಾರ ನೀಡಲಾಯಿತು.