ಬಂಟ್ವಾಳ: ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆ ಬಿ.ಸಿ.ರೋಡು ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಸುಂದರ ಬಿ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉತ್ತರ ಪ್ರದೇಶ ಘೋರಖ್‌ಪುರದ ಇಸ್ಫಾಟ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ಲೋಕನಾಥ್ ದೇವಂದಬೆಟ್ಟು ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಕೌಟುಂಬಿಕ ಭಾವನಾತ್ಮಕ ಸಂಬAಧಗಳು ದೂರವಾಗುತ್ತಿದ್ದು ಹಿರಿಯರಿಗೆ ಸಾಂತ್ವನ ಹಾಗೂ ರಕ್ಷಣೆಗೆ ಸಂಘಗಳು ಅಗತ್ಯ. ಕೊರೊನ ಕಾಯಿಲೆ ಸಂದರ್ಭದಲ್ಲಿ ಸಂಘವು ಜಾಗೃತಿ ಮೂಡಿಸುತ್ತಿರುವುದು ಅನುಕರಣೀಯ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಶ್ರೀಮತಿ ಜಯಂತಿ ಗಂಗಾಧರ್, ತುಂಬೆ ಕುಲಾಲ ಸೇವಾ ಸಂಘದ ಅಧ್ಯಕ್ಷ ಶ್ರೀ ಐತ್ತಪ್ಪ ಕುಲಾಲ್, ಬಂಟ್ವಾಳ ಕುಲಾಲ ಯುವ ವೇದಿಕೆಯ ಅಧ್ಯಕ್ಷ ಶ್ರೀ ಸತೀಶ್ ಜಕ್ರಿಬೆಟ್ಟು ಭಾಗವಹಿಸಿದರು.
ಕಾರ್ಯದರ್ಶಿ ಶೇಷಪ್ಪ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಸಾಧನೆ ಹಾಗೂ ಮುಂದಿನ ಯೋಚನೆ, ಯೋಜನೆಗಳನ್ನು ತಿಳಿಸಿದರು. ಸರ್ಕಾರದದಿಂದ ಜನರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ಯೋಗ ಗುರು ಶ್ರೀ ತನಿಯಪ್ಪ ಬಂಗೇರರನ್ನು ಸನ್ಮಾನಿಸಲಾಯಿತು. ವೀಣಾ ಸುಂದರ್ ಪ್ರಾರ್ಥನೆ ಹಾಡಿದರು.
ಕೋಶಾಧಿಕಾರಿ ಪದ್ಮನಾಭ ಎಂ. ಲೆಕ್ಕ ಪತ್ರ ಮಂಡಿಸಿದರು. ವಿಠ್ಠಲ ಬಂಗೇರ, ಸೋಮಯ್ಯ ಮೂಲ್ಯ, ಕಿಟ್ಟು ಮೂಲ್ಯ, ಓಬಯ ಮೂಲ್ಯ, ರತ್ನಾವತಿ, ಶೀನ ಮೂಲ್ಯ, ಡೊಂಬಯ ಮೂಲ್ಯ, ಜನಾರ್ದನ ಸಾಲಿಯಾನ್, ಕ್ರಷ್ಣಪ್ಪ ಮೂಲ್ಯ, ವಿಠ್ಠಲ ಜಕ್ರಿಬೆಟ್ಟು,ದಿನಕರ ಉದ್ಯಾವರ ರೋಹಿಣಿ ಸಹಕರಿಸಿದರು.
ಸೋಮಪ್ಪ ಮೂಲ್ಯ ಸ್ವಾಗತಿಸಿದರು. ಕೃಷ್ಣ ಶ್ಯಾಮ್ ವಂದಿಸಿದರು. ಶ್ರೀಮತಿ ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.