ಮಾಣಿ: ಮಾಣಿ ಕುಲಾಲ ಸೇವಾ ಸಂಘದ ವಾರ್ಷಿಕ ಉತ್ಸವ “ಕುಲಾಲ ಸಂಭ್ರಮ -2021 ” ಮಾಣಿ ಕುಲಾಲ ಭವನದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷರಾಗಿ ಮಾಣಿ ಕುಲಾಲ ಸೇವಾ ಸಂಘದ ಅಧ್ಯಕ್ಷರಾದ ಭೋಜ ನಾರಾಯಣ ನೇರಳಕಟ್ಟೆ ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಬೆಂಗಳೂರು ಕುಲಾಲ ಸಂಘದ ಗೌರವ ಅಧ್ಯಕ್ಷ ಈಶ್ವರ ಮೂಲ್ಯ, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ ಚೆಂಡ್ಲ, ಪುತ್ತೂರು ಕುಂಬಾರ ಗುಡಿ ಕೈಗಾರಿಕಾ ಸಹಕಾರ ಸಂಘ ದ ಅಧ್ಯಕ್ಷ ಭಾಸ್ಕರ್ ಪೆರುವಾಯಿ, ಸವಿತಾ ಗೋಪಾಲ್ ಶಂಭುಗ ನೆಲ್ಲಿ, ಕಣಚೂರು ಕಾಲೇಜ್ ನ ಉಪನ್ಯಾಸಕರಾದ ಡಾ. ರಕ್ಷಿತ್ ಬಂಗೇರ , ಕುಲಾಲ ಯುವ ವೇದಿಕೆ ಬಂಟ್ವಾಳ ಇದರ ಅಧ್ಯಕ್ಷ ಸತೀಶ್ ಕುಲಾಲ್, ಉಮೇಶ್ ಆರ್. ಮೂಲ್ಯ ಪೆರ್ನೆ, ರಾಜೇಶ್ ಕುಲಾಲ್ ಕಾಗೆ ಕಾನ, ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲ್ಲೂಕಿನ ಅಧ್ಯಕ್ಷರಾದ ಗಣೇಶ್ ಕುಲಾಲ್, ಉದ್ಯಮಿ ದಿನೇಶ್ ಕುಲಾಲ್ ಮಿತ್ತಪೆರಾಜೆ, ಗೌರವ ಅಧ್ಯಕ್ಷರಾದ ರಾಮಚಂದ್ರ ಮೂಲ್ಯ ನೇರಳಕಟ್ಟೆ, ಗೌರವ ಕಾರ್ಯದರ್ಶಿ ನಾರಾಯಣ ಕುಲಾಲ್ ಸೂರಿಕುಮೇರ್, ಮಾಣಿ ಕುಲಾಲ ಸೇವಾ ಸಂಘದ ಕಾರ್ಯದರ್ಶಿ ಪದ್ಮನಾಭ ಕೊಮ್ಮ ಕೊಡಿ ಮಹಿಳಾ ಘಟಕದ ಅಧ್ಯಕ್ಷೆ ರಾಜೀವಿ ಮಾಣಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಯತಿರಾಜ್ ಪೆರಾಜೆ ಸ್ವಾಗತಿಸಿ , ಗೋಪಾಲಕೃಷ್ಣ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.