ವಾಸ್ತು ಶಾಸ್ತ್ರಜ್ಞ
ಹೇಳಿದಂತೆ
ಮನೆ ಕಟ್ಟಿಕೊಟ್ಟ
ಇಂಜಿನಿಯರ್…
ದೇವ ಮೂಲೆ
ಅಗ್ನಿಮೂಲೆ,ವಾಯುಮೂಲೆ
ಎಷ್ಟೊಂದು ಮೂಲೆಗಳು…
ಈಶಾನ್ಯದಲ್ಲಿ ಅಡುಗೆಕೋಣೆ
ವಾಯುವ್ಯದಲ್ಲಿ ಸ್ನಾನ ಗೃಹ
ಪೂರ್ವದಲ್ಲಿ ದೇವರ ಕೋಣೆ
ದಕ್ಷಿಣಕ್ಕೆ ಹಾಸಿಗೆ
ದಿಕ್ಕಿಗೊಂದು ಕೋಣೆ..
ಒಂದು ದಿಕ್ಕು ಹಣ ಹರಿದು ಬರಲು
ಇನ್ನೊಂದು ಸುಖ ನೆಮ್ಮದಿಗೆ
ಆರೋಗ್ಯಕ್ಕೂ ದಿಕ್ಕಿದೆ..
ಆದರೆ…
ಅಪ್ಪ ಬಂದಾಗ
ಮಗನ ಮುಖ
ಅಣ್ಣನ ಕಂಡಾಗ ತಮ್ಮನ ಮುಖ
ಅಕ್ಕನ ,ತಂಗಿಯ
ಅಮ್ಮನ,ಅತ್ತೆಯ, ಸೊಸೆಯ
ಮುಖಗಳು
ಒಬ್ಬರನ್ನೊಬ್ಬರು ಕಂಡಾಗ
ಒಂದೊಂದು ದಿಕ್ಕಿಗೆ ತಿರುಗುವುದು..
ಇದು ಕೂಡಾ ವಾಸ್ತು ಪ್ರಕಾರ
ಮನೆಯಲ್ಲಿ…
ಮನೆಯ ವಾಸ್ತು
ನೋಡುವ ಮೊದಲೊಮ್ಮೆ
ಮನೆಯವರ ವಾಸ್ತು
ನೋಡಬೇಕು..!
✍ಯತೀಶ್ ಕಾಮಾಜೆ