ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು.
ವಿಟ್ಲ, ಸಮುದಾಯ ಆರೋಗ್ಯ ಕೇಂದ್ರದ ಆರ್.ಕೆ.ಎಸ್.ಕೆ ಕೌನ್ಸಿಲರ್ ಆಗಿರುವ ಶ್ರುತಿ ಶೆಟ್ಟಿ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಪೌಢಾವಸ್ಥೆಗೆ ಬಂದಾಗ ದೇಹದಲ್ಲಿ ಉಂಟಾಗುವ ಬದಲಾವಣೆ, ದೈಹಿಕ ಹಾಗೂ ಮಾನಸಿಕ ಸ್ವಚ್ಛತೆ, ಅಪರಿಚಿತರೊಂದಿಗೆ ತಮ್ಮ ವರ್ತನೆ, ಮಾನಸಿಕ ನಿಯಂತ್ರಣದೊಂದಿಗೆ ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಪರಿಹಾರ ತಿಳಿಸಿದರು.
ಬಾಳ್ತಿಲ ಆರೋಗ್ಯ ಕೇಂದ್ರದ ವೀರೇಶ್ ಮಾತನಾಡುತ್ತಾ, ಕೋರೋನ ಲಸಿಕೆಯನ್ನು ನಿಮ್ಮ ಮನೆಯಲ್ಲಿರುವ 45 ವರ್ಷದ ಹಿರಿಯರಿಗೆ ಹಾಕಿಸುವಂತೆ ಮಕ್ಕಳಲ್ಲಿ ಮನವಿ ಮಾಡಿದರು. ಹಾಗೂ ಕೋರೊನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಕೊರೊನ ಲಸಿಕೆ ಹಾಕಿಸಲು ಶ್ರೀರಾಮ ವಿದ್ಯಾಕೇಂದ್ರ ನೀಡಿದ ಬಸ್ಸಿನ ವ್ಯವಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಹೆಣ್ಣುಮಕ್ಕಳ ಸುರಕ್ಷೆಯ ನಿಟ್ಟಿನಲ್ಲಿ ಶಾಲೆಯ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ಸುರಕ್ಷಾ ಸಮಿತಿಯನ್ನು ರಚಿಸಲಾಯಿತು.
ವೇದಿಕೆಯಲ್ಲಿ ಮಾತೃಭಾರತಿ ಸಮಿತಿಯ ಸದಸ್ಯರಾದ ಮಮತಾ ಹಾಗೂ ಸ್ವಾತಿ ಮತ್ತು ಮುಖ್ಯೋಪಾಧ್ಯಯರಾದ ರವಿರಾಜ್‌ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಪ್ರೀತಾ ನಿರೂಪಿಸಿ, ಸುಮಂತ್ ಆಳ್ವ ಸ್ವಾಗತಿಸಿ ವಂದಿಸಿದರು.