ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಕಠಿನ ನಿಯಮಗಳನ್ನು ರಾಜ್ಯ ಸರಕಾರ ಜಾರಿಗೊಳಿಸಿದ್ದು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಕೊರೋನಾ ಹೆಚ್ಚಾಗಿರುವ ಕೆಲ ಜಿಲ್ಲೆಗಳಲ್ಲಿ ಯಾವೆಲ್ಲ ನಿಯಮಗಳನ್ನು ಜಾರಿಗೆ ತಂದಿದ್ದಾರೆ, ಏನು ಕ್ರಮಗಳು ಮತ್ತು ಏನೇನೂ ಇರುತ್ತೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
* ವಿದ್ಯಾಗಮನವೂ ಸೇರಿದಂತೆ 6 ರಿಂದ 9ನೇ ತರಗತಿ ಸ್ಥಗಿತಗೊಳಿಸಲಾಗಿದೆ. 10, 11 ಹಾಗೂ 12ನೇ ತರಗತಿಗಳು ಪ್ರಸ್ತುತ ಇರುವಂತೆಯೇ ಮುಂದುವರೆಯುತ್ತವೆ. ಆದಾಗ್ಯೂ ತರಗತಿಗಳಿಗೆ ವಿದ್ಯಾರ್ಧಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ.
* ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ ಗಳ ತರಗತಿಗಳಲ್ಲಿ ಮಂಡಳಿಯು, ವಿವಿ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿಗಳ್ನು ಹೊರತು ಪಡಿಸಿ, ಇತರ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.
* ವಸತಿ ಶಾಲೆಗಳು, ಬೋರ್ಡಿಂಗ್ ಇರುವ ಶಾಲೆಗಳಲ್ಲಿ 10, 11 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹೊರತಾಗಿ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಸಲಾಗಿದೆ.
*ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿರುತ್ತದೆ. ಆದ್ರೇ ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ.
*ಅಪಾರ್ಮೆಂಟ್ ಕಾಂಪ್ಲೆಕ್ಸ್ ಗಳಲ್ಲಿ, ಸಾಮಾನ್ಯವಾಗಿ ನಿವಾಸಿಗಳು, ಜನರು ಸೇರುವ ಸ್ಥಳಗಳಾದ ಜಿಮ್, ಪಾರ್ಟಿ ಹಾಲ್ ಗಳು, ಕ್ಲಬ್, ಈಜುಕೊಳ ಇತ್ಯಾದಿಗಳು ಮುಚ್ಚಲ್ಪಟ್ಟಿರುತ್ತವೆ.
*ಉಳಿದಂತೆ ಎಲ್ಲಾ ಜಿಮ್ ಗಳು ಹಾಗೂ ಈಜುಕೊಳಗಳು ಮುಚ್ಚಲ್ಪಟ್ಟಿರುತ್ತವೆ.
*ಯಾವುದೇ ತರಹದ Rally, ಮುಷ್ಕರ, ಧರಣಿ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.
*ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕರ ಸಂಖ್ಯೆಯು ನಿಗದಿ ಪಡಿಸಿರುವ ಆಸನದ ವ್ಯವಸ್ಥೆಯನ್ನು ಮೀರುವಂತಿಲ್ಲ
*ಕಛೇರಿಗಳು ಹಾಗೂ ಇತರ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸುವ ಅಭ್ಯಾಸ ವ್ಯವಸ್ಥೆಯನ್ನು ಪಾಲಿಸುವುದು.
*ಬೆಂಗಳಊರು ನಗರ, ಗ್ರಾಮಾಂತರ, ಬಿಬಿಎಂಪಿ ಸೇರಿದಂತೆ ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸಿನಿಮಾ ಹಾಲ್ ಗಳಲ್ಲಿ ಪರ್ಯಾಯ ಆಸನಗಳಲ್ಲಿ ಕೂರುವಂತೆ, ಒಂದು ಬಿಟ್ಟೊಂದಾದ ಸೀಟುಗಳಲ್ಲಿ ಕುಳಿತುಕೊಳ್ಳುವಂತೆ ಗರಿಷ್ಠ 50 ವೀಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸುವುದು
*ಬೆಂಗಳೂರು ನಗರ, ಗ್ರಾಮಾತಂರ ಬಿಬಿಎಂಪ ವ್ಯಾಪ್ತಿ ಸೇರಿದಂತೆ ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳ್ಲಲಿ ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ ಗಳಲ್ಲಿ ಗರಿಷ್ಠ ಗ್ರಾಹಕರ ಸಂಖ್ಯೆಯು ಶೇ.50ರಷ್ಟು ಮೀರುವಂತಿಲ್ಲ.
ಈ ನಿಯಮ ಉಲ್ಲಂಘಿಸಿದ್ರೇ ಕ್ರಮ, ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು, ಜಾತ್ರೆ, ಮಹೋತ್ಸವಗಳು ಮೇಳಗಳು ಗುಂಪು ಸೇರುವುದರ ನಿಷೇಧ
ಈ ನಿಯಮಗಳು 20-04-2021ರವರೆಗೆ ಮುಂದುವರೆಯಲಿವೆ.