ದೆಹಲಿ: ದೇಶದಲ್ಲಿ ಕೊರೋನ ರಣಕೇಕೆ ಮುಂದುವರಿದಿದ್ದು ರವಿವಾರ ಒಂದೇ ದಿನ ದೇಶದಲ್ಲಿ 1,622 ಮಂದಿ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ.
ಕಳೆದ 24 ಗಂಟೆಯ ಅವಧಿಯಲ್ಲಿ 2.75 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನ ಪಾಸಿಟಿವ್ ಆಗಿದೆ.
ಒಟ್ಟು ಪ್ರಕರಣಗಳು: 1,50,61,919, ಸಕ್ರಿಯ ಪ್ರಕರಣಗಳು: 19,29,329, ಒಟ್ಟು ಚೇತರಿಕೆಗಳು: 1,29,53,821, ಸಾವಿನ ಸಂಖ್ಯೆ: 1,78,769.