ದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ಸುನಾಮಿಯಾಗಿ ಆರ್ಭಟಿಸುತ್ತಿದ್ದು ಮಂಗಳವಾರ ಒಂದೇ ದಿನ 2.94 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅದೇ ರೀತಿ ದೇಶದಲ್ಲಿ ಮೊದಲ ಬಾರಿ ಕೊರೋನದಿಂದ ಸತ್ತವರ ಸಂಖ್ಯೆ ಎರಡು ಸಾವಿರಕ್ಕಿಂತ ಅಧಿಕವಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 62,097, ದೆಹಲಿಯಲ್ಲಿ 28,395, ಕರ್ನಾಟಕ 21,794, ಕೇರಳ 19,577, ಗುಜರಾತ್ 12,206, ರಾಜಸ್ಥಾನ್ 12,201, ತಮಿಳುನಾಡು 10,986, ಬಿಹಾರ 10,455, ಪಶ್ಚಿಮ ಬಂಗಾಳ 9,819, ಹರಿಯಾಣ 7,811, ತೆಲಂಗಾಣ 5,926, ಜಾರ್ಖಂಡ್ 4,969, ಒಡಿಶಾ 4,761, ಉತ್ತರಾಖಾಂಡ 3,012, ಜಮ್ಮು ಮತ್ತು ಕಾಶ್ಮೀರ 2,030 ಮತ್ತು ಗೋವಾದಲ್ಲಿ 1,160 ಕೊರೋನ ಪ್ರಕರಣಗಳು ದೃಢಪಟ್ಟಿದ್ದು ದೇಶದಲ್ಲಿ ಒಟ್ಟು 2,94,291 ಮಂದಿಗೆ ಕೊರೋನ ಪಾಸಿಟಿವ್ ಆಗಿದೆ.
ಕೊರೋನ ಸೋಂಕು ಬೆಳಕಿಗೆ ಬಂದ ಬಳಿಕ ಅಮೆರಿಕಾದಲ್ಲಿ ಒಂದೇ ದಿನ 3,07,570 ಮಂದಿಗೆ ಸೋಂಕು ಪಸಿಟಿವ್ ಆಗಿದ್ದು ಜಗತ್ತಿನಲ್ಲೇ ಅತ್ಯಧಿಕ ಎಂದು ಪರಿಗಣಿಸಲ್ಪಟ್ಟಿದೆ. ಅಮೆರಿಕಾದಲ್ಲಿ ಒಂದೇ ದಿನ ಪತ್ತೆಯಾದ ದಾಖಲೆಯ ಸಂಖ್ಯೆಯ ಸನಿಹಕ್ಕೆ ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಬರುತ್ತಿರುವುದು ದೇಶದ ಜನರಲ್ಲಿ ಆತಂಕವನ್ನು ಉಂಟುಮಾಡಿದೆ.
ಮಂಗಳವಾರದAದು ದೇಶದಲ್ಲಿ ಒಟ್ಟು 2,021 ಮಂದಿ ಕೊರೋನ ಸೋಂಕಿನಿAದ ಸಾವನ್ನಪ್ಪಿದ್ದು ಮಹಾರಾಷ್ಟ್ರ ಒಂದರಲ್ಲೇ 519 ಮಂದಿ ಬಲಿಯಾಗಿದ್ದಾರೆ. ದೆಹಲಿಯಲ್ಲಿ 277, ಛತ್ತೀಸ್ಘಡ 191, ಉತ್ತರ ಪ್ರದೇಶ 162, ಕರ್ನಾಟಕ 149 ಹಾಗೂ ಗುಜರಾತಿನಲ್ಲಿ 121 ಮಂದಿ ಸಾವಿಗೀಡಾಗಿದ್ದಾರೆ. ಎರಡನೇ ಅಲೆ ಆರಂಭವಾದಾಗ ಏಪ್ರಿಲ್ ತಿಂಗಳೊAದರಲ್ಲೇ ಒಟ್ಟು 34 ಲಕ್ಷ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಕಳೆದ ಏಳು ದಿನಗಳ ಅವಧಿಯಲ್ಲಿ 17.40 ಲಕ್ಷ ಪ್ರಕರಣಗಳು ಪತ್ತೆಯಾಗಿರುವುದು ಆಘಾತಕಾರಿ ಅಂಶವಾಗಿದೆ.