Thursday, October 19, 2023

ಕೊರೋನ ರೋಗಿಗಳ ಆರೈಕೆ ಮಾಡುವ ಆರೋಗ್ಯ ಕಾರ್ಯಕರ್ತರಿಗೆ ಬಿಗ್ ಶಾಕ್ ನೀಡಿದ ಕೇಂದ್ರ ಸರಕಾರ

Must read

ದೆಹಲಿ: ಕೊರೊನಾ ಸೋಂಕಿತರ ಆರೈಕೆ ಸಂದರ್ಭದಲ್ಲಿ ಮೃತಪಡುವ ಆರೋಗ್ಯ ಕಾರ್ಯಕರ್ತರಿಗೆ ನೀಡುವ 50 ಲಕ್ಷ ರೂ. ವಿಮೆ ಸೌಲಭ್ಯವನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಡಿದ್ದು ಆರೋಗ್ಯ ಕಾರ್ಯಕರ್ತರಿಗೆ ಬಿಗ್ ಶಾಕ್ ನೀಡಿದಂತಾಗಿದೆ.

ಕೊರೊನಾ ಸೋಂಕಿತರ ಆರೈಕೆ ಸಂದರ್ಭದಲ್ಲಿ ಮೃತಪಡುವ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ. ವಿಮೆ ನೀಡುವುದಾಗಿ 2020ರ ಮಾರ್ಚ್ 20ರಂದು ಕೇಂದ್ರ ಸರಕಾರ ಘೋಷಣೆ ಮಾಡಿತ್ತು. ಆದರೆ ಈ ವಿಮೆ ಸೌಲಭ್ಯ 2021ರ ಮಾರ್ಚ್ 24ರಂದು ಅಂತ್ಯವಾಗಿದೆ. ಈ ದಿನಾಂಕಕ್ಕೆ ಮೊದಲು ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಕುಟುಂಬಗಳು ಸೌಲಭ್ಯ ಪಡೆಯಲು ಒಂದು ತಿಂಗಳು ಅವಕಾಶ ಕಲ್ಪಿಸಲಾಗಿದೆ ಎಂದು ಈ ಕುರಿತು ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣೆ ತಿಳಿಸಿದ್ದಾರೆ.

ಒಟ್ಟು 287 ಕುಟುಂಬಗಳಿಗೆ ಈವರೆಗೆ ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ವಿಮೆ ಹಣ ನೀಡಲಾಗಿದೆ. ಆದರೆ ಆರೋಗ್ಯ ಕಾರ್ಯಕರ್ತರು ಕೊರೋನ ಸೋಂಕಿತರ ಆರೈಕೆ ಮಾಡುವಂತೆ ಪ್ರೋತ್ಸಾಹ ನೀಡಿದ್ದ ಈ ಸೌಲಭ್ಯವನ್ನು ರದ್ದು ಮಾಡಿರುವುದು ಆರೋಗ್ಯ ಕಾರ್ಯಕರ್ತರಿಗೆ ಬಿಗ್ ಶಾಕ್ ನೀಡಿದಂತಾಗಿದೆ.

More articles

Latest article