ದೆಹಲಿ: ಕೊರೋನಾ ಸೋಂಕಿಗೆ ಕಾರಣವಾದ ಸಾರ್ಸ್ ಸಿಒವಿ -2 ವೈರಸ್ ಗಾಳಿಯ ಮೂಲಕ ಹೆಚ್ಚಾಗಿ ಹರಡುತ್ತಿದೆ ಎಂಬ ಆಘಾತಕಾರಿ ಮಾಹಿತಿಯೊಂದು ತಜ್ಞರ ಹೊಸ ಅಧ್ಯಯನದಲ್ಲಿ ತಿಳಿದು ಬಂದಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಲ್ಯಾನ್ಸೆಟ್ ವೈದ್ಯಕೀಯ ಪತ್ರಿಕೆಯಲ್ಲಿ ಈ ಮಾಹಿತಿ ಪ್ರಕಟಿಸಲಾಗಿದೆ. ವೈರಸ್ ಗಾಳಿಯಿಂದ ಹರಡುವ ಅಂಶವನ್ನು ಜನತೆ ನಿರ್ಲಕ್ಷಿಸಿದ ಪರಿಣಾಮ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಪರಿಸರ ವಿಜ್ಞಾನ ಸಂಶೋಧನೆಯ ಸಹಕಾರಿ ಸಂಸ್ಥೆ ಮತ್ತು ಕೊಲರಾಡೋದ ಬೌಲ್ಡರ್ ವಿವಿ ಪ್ರಮುಖ ತಜ್ಞ ಜೋಸ್ ಲೂಯಿಸ್ ಜಿಮೆನೆಜ್ ಬಾಯಿ ಮೂಗಿನಿಂದ ಅಲ್ಲ, ಗಾಳಿಯಿಂದ ವೈರಸ್ ಹರಡುತ್ತದೆ ಎಂದು ತಿಳಿಸಿದ್ದಾರೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ, ಇತರೆ ಆರೋಗ್ಯ ಸಂಸ್ಥೆಗಳು ಗಾಳಿಯಿಂದ ಸೋಂಕು ಹರಡುವುದನ್ನು ತಡೆಯಲು ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಲು ಸಲಹೆ ನೀಡಲಾಗಿದೆ.