ದೆಹಲಿ: ಕೋವಿಡ್ – 19 ಪಾಸಿಟಿವ್ ಪ್ರಕರಣ ದೇಶದಲ್ಲಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪದಲ್ಲಿ ಹೆಚ್ಚುತ್ತಿದ್ದು ಬುಧವಾರ ಒಂದೇ ದಿನ ದೇಶದಲ್ಲಿ 1,99,620 ಹೊಸ ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ದೇಶದಲ್ಲಿ ಕೊರೋನ ಎರಡನೇ ಅಲೆ ನಿಯಂತ್ರಣಕ್ಕೆ ಸಾಕಷ್ಟು ಜಾಗೃತಿ, ಪ್ರಯತ್ನಗಳು ನಡೆಯುತ್ತಿರುವ ಮಧ್ಯೆಯೂ ಒಂದೇ ದಿನ ಎರಡು ಲಕ್ಷದಷ್ಟು ಪಾಸಿಟಿವ್ ಪ್ರಕರಣ ದಾಖಲಾಗಿರುವುದು ಆತಂಕವನ್ನು ಉಂಟುಮಾಡಿದೆ.
ಕಳೆದ 24 ಗಂಟೆಯ ಅವಧಿಯಲ್ಲಿ ಕೋವಿಡ್ ನಿಂದ 1,038 ಮಂದಿ ಸಾವನ್ನಪ್ಪಿದ್ದಾರೆ. 2020ರ ಅಕ್ಟೋಬರ್ ತಿಂಗಳಲ್ಲಿ ಒಂದೇ ದಿನ 1,035 ಮಂದಿ ಕೊರೋನದಿಂದ ಮೃತಪಟ್ಟಿದ್ದು ದೇಶದಲ್ಲಿ ಅತ್ಯಧಿಕವಾಗಿತ್ತು. ಆ ಸಂಖ್ಯೆಯನ್ನು ಮೀರಿ ಬುಧವಾರ ಸಾವು ಸಂಭವಿಸಿದೆ.
ಬುಧವಾರ ಉತ್ತರ ಪ್ರದೇಶದಲ್ಲಿ 20,510, ಮಹಾರಾಷ್ಟ್ರದಲ್ಲಿ 20,000, ದಿಲ್ಲಿಯಲ್ಲಿ 17,282, ಕರ್ನಾಟಕದಲ್ಲಿ 11,265, ಮಧ್ಯಪ್ರದೇಶದಲ್ಲಿ 9,720, ಗುಜರಾತ್ ನಲ್ಲಿ 7,410, ರಾಜಸ್ಥಾನದಲ್ಲಿ 6,200, ಹರ್ಯಾಣದಲ್ಲಿ 5,398, ಬಂಗಾಳದಲ್ಲಿ 5,892 ಮತ್ತು ಬಿಹಾರದಲ್ಲಿ 4,786 ಕೊರೋನ ಪಾಸಿಟಿವ್ ಪ್ರಕರಣ ವರದಿಯಾಗಿದೆ.
ದೇಶದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 1,40,74,564ಕ್ಕೆ ಏರಿಕೆ ಕಂಡಿದೆ. ಇಲ್ಲಿಯವರೆಗೂ ಒಟ್ಟು 1,73,123 ಜನರು ಸಾವನ್ನಪ್ಪಿದ್ದಾರೆ.