ದೆಹಲಿ: ಭಾರತದ ಹಳೆಯ ಬ್ಯಾಂಕುಗಳಲ್ಲಿ ಒಂದಾಗಿರುವ ಅಮೆರಿಕಾ ಮೂಲದ ಸಿಟಿ ಬ್ಯಾಂಕ್ ಭಾರತದಲ್ಲಿನ ತನ್ನ ಎಲ್ಲಾ ಶಾಖೆಗಳನ್ನು ಮುಚ್ಚುವುದಾಗಿ ಘೋಷಿಸಿದೆ.
ದೇಶದಲ್ಲಿ ತನ್ನ ಎಲ್ಲಾ ಶಾಖೆಗಳನ್ನು ಮುಚ್ಚುವುದಕ್ಕಾಗಿ ಸಿಟಿ ಬ್ಯಾಂಕ್ ಆರ್‌ಬಿಐನ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ.
ದೇಶದಲ್ಲಿ ಹಂತ ಹಂತವಾಗಿ ಸೇವೆಗಳನ್ನು ಸ್ಥಗಿತಗೊಳಿಸಲು ಬ್ಯಾಂಕ್ ಉದ್ದೇಶಿಸಿದೆ. ಸದ್ಯ ಗ್ರಾಹಕ ಸೇವೆಗಳು ಮುಂದುವರೆಯಲಿದೆ. ಇದರಿಂದಾಗಿ ಭಾರತದಲ್ಲಿನ ಬ್ಯಾಂಕ್ ಉದ್ಯೋಗಿಗಳು ಮತ್ತು ಗ್ರಾಹಕರ ಮೇಲೆ ಯಾವುದೇ ಪರಿಣಾಮ ತಕ್ಷಣಕ್ಕೆ ಇರುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಭಾರತದಲ್ಲಿ ಸದ್ಯಕ್ಕೆ 20,000 ಉದ್ಯೋಗಿಗಳು ಸಿಟಿ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅವರ ಭವಿಷ್ಯದ ಮೇಲೆ ಕಾರ್ಮೋಡ ಕವಿಯಲಿದೆ ಎಂದೇ ಹೇಳಲಾಗುತ್ತಿದೆ.