Monday, April 8, 2024

ವಿಟ್ಲ ಸಿ.ಡಿ.ಪಿ.ಒ. ಸುಧಾಜೋಶಿ ಅವರೊಂದಿಗೆ ಸ್ನೇಹ ಕೂಟ ಕಾರ್ಯಕ್ರಮ

ಬಂಟ್ವಾಳ: ಎಪ್ರಿಲ್ 30ರಂದು ನಿವೃತ್ತಿ ಹೊಂದಲಿರುವ ವಿಟ್ಲ ಸಿ.ಡಿ.ಪಿ.ಒ. ಸುಧಾಜೋಶಿ ಅವರಿಗೆ ಬಂಟ್ವಾಳ ಸಿ.ಡಿ.ಪಿ.ಒ. ಕಚೇರಿಯ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಬಂಟ್ವಾಳ ತಾಲೂಕಿನ ಸ್ತ್ರೀಶಕ್ತಿ ಒಕ್ಕೂಟದ ವತಿಯಿಂದ ಸ್ನೇಹ ಕೂಟ ಕಾರ್ಯಕ್ರಮ ಬಂಟ್ವಾಳ ಸಿ.ಡಿ.ಪಿ.ಒ. ಗಾಯತ್ರಿ ಕಂಬಳಿ ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಮಾತನಾಡಿ, ಸರಕಾರಿ ಕೆಲಸದಲ್ಲಿ ನಿವೃತ್ತಿ ಜೀವನ ಅನಿವಾರ್ಯ. ಆದರೆ ನಿವೃತ್ತಿಯ ಬಳಿಕವೂ ನಿಮ್ಮ ಸೇವೆಯ ಗುರುತಿಸುವಿಕೆ ನಿಮ್ಮ ಸೇವಾ ಕಾರ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಹೇಳಿದರು.

ಒತ್ತಡದ ಮಧ್ಯೆಯೂ ಸರಕಾರಿ ಸೇವೆಯಲ್ಲಿ ಚ್ಯುತಿ ಬರದ ರೀತಿಯಲ್ಲಿ ಕೆಲಸ ಮಾಡಿರುವ ಅವರು ಇತರರಿಗೆ ಮಾದರಿಯಾಗಿದೆ. ನನ್ನ ವೈಯಕ್ತಿಕ ಜೀವನದಲ್ಲಿ ಸಹಾಯ ಮಾಡಿದ ಸುಧಾಜೋಶಿ ಮತ್ತು ಗಾಯತ್ರಿ ಕಂಬಳಿ ಇಬ್ಬರೂ ಆದರ್ಶ ಮಹಿಳೆಯರು ಎಂದು ಅವರು ಹೇಳಿದರು.

ಬಂಟ್ವಾಳ ಸಿ.ಡಿ.ಪಿ.ಒ. ಗಾಯತ್ರಿ ಕಂಬಳಿ ಮಾತನಾಡಿ, ಕಷ್ಟ ಸುಖ ಎರಡರಲ್ಲೂ ಸ್ಪಂದಿಸುವ ಹೃದಯವಂತಿಕೆ ಇರುವ ಅಧಿಕಾರಿ ಸುಧಾಜೋಶಿ ಅವರು ಎಂದು ಹೇಳಿದರು.

ಸುಸಂಸ್ಕೃತೆಯಾಗಿದ್ದು ವಿಶಾಲ ಮನೋಭಾವದ ಅಧಿಕಾರಿಯಾಗಿರುವ ಇವರಿಂದ ಅನೇಕ ಕೊಡುಗೆಗಳು ಸಮಾಜಕ್ಕೆ ಹಾಗೂ ಇಲಾಖೆಗೆ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ. ನಿವೃತ್ತಿಯ ಬಳಿಕವೂ ಜನರ ಪ್ರೀತಿ ವಿಶ್ವಾಸ ಸಿಕ್ಕಿದರೆ ಅದಕ್ಕಿಂತ ಗೌರವ ಬೇರೆ ಇಲ್ಲ. ಅಂತಹ ಗೌರವಕ್ಕೆ ಸುಧಾಜೋಶಿ ಅವರು ಪಾತ್ರರಾಗಿದ್ದಾರೆ ಎಂದರು.

ಸ್ನೇಹ ಕೂಟ ಕಾರ್ಯಕ್ರಮದಲ್ಲಿ
ಗೌರವ ಸ್ವೀಕರಿಸಿದ ವಿಟ್ಲ ಸಿ.ಡಿ.ಪಿ.ಒ ಸುಧಾಜೋಶಿ ಮಾತನಾಡಿ, ಇಲಾಖೆಯಲ್ಲಿ ನೀಡಿದ ಗೌರವಕ್ಕೆ ಚಿರ ಋಣಿಯಾಗಿದ್ದೇನೆ. ನಿಮ್ಮ ಪ್ರೀತಿಯ ಗೌರವ ನನ್ನ ನಿವೃತ್ತಿ ಜೀವನಕ್ಕೆ ಸ್ಪೂರ್ತಿಯ ನೆಲೆಯಾಗಿದೆ ಎಂದು ಅವರು ಹೇಳಿದರು.

ವೃತ್ತಿ ಜೀವನ ಹಾಗೂ ಕುಟುಂಬದ ಜೊತೆ ಜೊತೆಯಾಗಿ ಕೆಲಸ ನಿರ್ವಹಣೆ ಮಾಡುವ ಹವ್ಯಾಸ ಸರಕಾರಿ ಸೇವೆಯಲ್ಲಿ ರೂಡಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಕಾಣಬಹುದು ಎಂಬುದನ್ನು ನಾನು ಅನುಭವದ ಮೂಲಕ ಕಂಡವಳು ಎಂದು ಅವರು ಹೇಳಿದರು.

ನಿಷ್ಠೆ, ಪ್ರೀತಿಯಿಂದ ಕೆಲಸ ಮಾಡಿದಾಗ ವೃತ್ತಿಯಲ್ಲಿ ಸಫಲತೆ ಕಾಣಬಹುದು. ಸರಕಾರಿ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಫಲಾನುಭವಿಗಳಿಗೆ ಸಿಗುವಂತೆ ಕೆಲಸ ಮಾಡಿ ಎಂದು ಅವರು ಕಿವಿ ಮಾತು ಹೇಳಿದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾವತಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ಸುಧಾಜೋಶಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇಲಾಖೆಯ ಮೇಲ್ವಿಚಾರಕಿಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬಂಟ್ವಾಳ ಸಿ.ಡಿ.ಪಿ.ಒ. ಗಾಯತ್ರಿ ಕಂಬಳಿ ಸ್ವಾಗತಿಸಿದರು. ಬಂಟ್ವಾಳ ತಾಲೂಕು ಸ್ತ್ರೀ ಒಕ್ಕೂಟದ ಕಾರ್ಯದರ್ಶಿ ಗೀತಾಜಯತೀರ್ಥ ವಂದಿಸಿದರು. ಹಿರಿಯ ಮೇಲ್ವಿಚಾರಕಿ ಬಿ. ಭಾರತಿ ಕಾರ್ಯಕ್ರಮ ನಿರೂಪಿಸಿದರು.

More from the blog

ವಿಶ್ವ ಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ “ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ” ಬೃಹತ್ ಪಾದಯಾತ್ರೆ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್,ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಲೋಕಕಲ್ಯಾಣಾರ್ಥವಾಗಿ "ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ" ಬೃಹತ್ ಪಾದಯಾತ್ರೆಯು ಭಾನುವಾರ ಮುಂಜಾನೆ ನಡೆಯಿತು. ಬೆಳಗ್ಗಿನ ಜಾವ‌ 5.30 ರ ವೇಳೆಗೆ ಕಡೆಗೋಳಿ ಪೊಳಲಿ ದ್ವಾರ,...

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಶ್ರಮಿಸಿದ ಸ್ವಯಂಸೇವಕರಿಗೆ ಕೃತಜ್ಞತಾ ಸಭೆ

ಬಂಟ್ವಾಳ: ದೇವಸ್ಥಾನದ ನಿರ್ಮಾಣ ಮಾಡಿದರೆ,ಸಾಲದು ಅದರ ಪ್ರಭಾವ ಇನ್ನಷ್ಟು ಬೆಳಗಬೇಕಾದರೆ ಭಕ್ತರು ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡಬೇಕಾಗಿದೆ ಎಂದು ಶ್ರೀ ಧಾಮ ಮಾಣಿಲ ಕ್ಷೇತ್ರದ ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ...

ಪ್ರಶಾಂತ್ ಪುಂಜಾಲಕಟ್ಟೆ ಅವರಿಗೆ ಪಿತೃ ವಿಯೋಗ

ಬಂಟ್ವಾಳ: ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಮಾಲಕರಾದ ಪ್ರಶಾಂತ್ ಪುಂಜಾಲಕಟ್ಟೆ ಅವರ ತೀರ್ಥರೂಪರು, ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ನಿವಾಸಿ ಸಂಜೀವ ಪೂಜಾರಿ( 83) ಅವರು ಅಲ್ಪಕಾಲದ ಅಸೌಖ್ಯದಿಂದ ಎ.6ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...