ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವ ಸಲುವಾಗಿ ಸರಕಾರದ ನಿಬಂಧನೆಗಳನ್ನು ಅನುಸರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಚರಿಸುವ ಸಲುವಾಗಿ ಕ್ಯಾಂಪ್ಕೊ ಸಂಸ್ಥೆಯು ತಾತ್ಕಾಲಿಕವಾಗಿ ಅಡಿಕೆ ಖರೀದಿಗೆ ನಿಯಮಗಳನ್ನು ರೂಪಿಸಿದೆ. ಯಥಾಪ್ರಕಾರ 26.04.2021ರಿಂದ ಸರಕಾರಿ ರಜೆಗಳನ್ನೂ ಹೊರತುಪಡಿಸಿ 04.05.2021ರ ವರೆಗೆ ಕಾರ್ಯಚರಿಸಲಿದೆ.
1. 26.04.2021ರಿಂದ 04.05 2021ರ ಅವಧಿಯಲ್ಲಿ ಒಬ್ಬ ಸದಸ್ಯರಿಗೆ ಗರಿಷ್ಠ 1 ಕ್ವಿಂಟಾಲ್ ಅಡಿಕೆ ಮಾರಾಟಕ್ಕೆ ಅವಕಾಶ.
2. ಪ್ರತಿದಿನ ನಿಯಮಿತ ಸದಸ್ಯರಿಗೆ ಮಾತ್ರ ಅವಕಾಶ.
ಶಾಖಾಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಟೋಕನ್ ಪಡೆದುಕೊಳ್ಳತಕ್ಕದ್ದು. ಕರೆ ಮಾಡುವ ಸಮಯ ಬೆಳಿಗ್ಗೆ ಗಂಟೆ 9.30ರಿಂದ ಅಪರಾಹ್ನ 3.30ರ ವರೆಗೆ (ಆದಿತ್ಯವಾರ ಹೊರತುಪಡಿಸಿ). ದಿನದ ಮಿತಿಯ ಬಳಿಕ ಮುಂದಿನ ದಿನಕ್ಕೆ ಟೋಕನ್ ನೀಡಲಾಗುವುದು.
4. ಖರೀದಿ ಸಮಯ: ಬೆಳಿಗ್ಗೆ ಗಂಟೆ 9.30ರಿಂದ ಅಪರಾಹ್ನ 3.30ರ ವರೆಗೆ.
ಸಂಪರ್ಕ: ಅಶ್ವಿನ್: 6366875032 ಮಾಣಿ ಶಾಖೆ. ದಿನದ ಮಿತಿ 25 ಟೋಕನ್
ವಿ ಸೂ.:
1. ಕಾಳುಮೆಣಸು ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
2. ಕೊಕ್ಕೊ ಮತ್ತು ರಬ್ಬರ್ ಖರೀದಿಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ.
ಸದಸ್ಯರು ಆಯಾ ಶಾಖೆಗಳಿಗೆ ಬರುವಾಗ ಕ್ಯಾಂಪ್ಕೊ ಸದಸ್ಯತ್ವದ ಗುರುತು ಚೀಟಿ, ಕ್ಯಾಂಪ್ಕೊ ಕಾರ್ಡು, ಪಹಣಿ ಪತ್ರವನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದರ ಜತೆಗೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಕನಿಷ್ಠ 3 ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳತಕ್ಕದ್ದು.
ಕ್ಯಾಂಪ್ಕೊ ಸದಸ್ಯರು ಈ ಯೋಜನೆಯ ಪ್ರಯೋಜನೆಯನ್ನು ಪಡೆದುಕೊಳ್ಳಬೇಕಾಗಿ ವಿನಂತಿ.
ಸರಕಾರದ ಸೂಚನೆಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೋವಿಡ್ ಮಾನದಂಡಗಳನ್ನು ಅನುಸರಿಸುವುದು ಪ್ರತಿಯೊಬ್ಬರ ಜವಾಬ್ದಾರಿ.