ದೆಹಲಿ: ಭಾರತದಲ್ಲಿ ರವಿವಾರ ಒಂದೇ ದಿನ 3,54,531 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. 2,806 ಮಂದಿ ಮೃತಪಟ್ಟಿದ್ದಾರೆ. ದೇಶದ ಒಟ್ಟು ಕೊರೊನಾ ವೈರಸ್ ಕೇಸ್ ಲೋಡ್ ಈಗ 1,69.60,172ಕ್ಕೆ ಏರಿದೆ. ದೇಶದಲ್ಲಿ ಇದುವರೆಗೂ 1,40,85,110 ಜನರು ಗುಣಮುಖರಾಗಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 1,92,311ಕ್ಕೆ ಏರಿದೆ. ಸದ್ಯ ದೇಶದಲ್ಲಿ 26,82,751 ಸಕ್ರಿಯ ಪ್ರಕರಣಗಳಿವೆ.
ದೇಶದಲ್ಲಿ ಕಳೆದ ಒಂದು ವಾರದಲ್ಲಿ 22.49 ಲಕ್ಷ ಪ್ರಕರಣಗಳು ಸೇರ್ಪಡೆಯಾಗಿದೆ. ಕಳೆದ ಏಳು ದಿನಗಳಲ್ಲಿ 16,257 ಮಂದಿ ಸೋಂಕಿಗೆ ಮೃತಪಟ್ಟಿದ್ದಾರೆ.