ಮಂಗಳೂರು: ಇಲ್ಲಿನ ಜೈಲಿನಲ್ಲಿ ಕೈದಿಗಳ ನಡುವೆ ಹೊಡೆದಾಟ ನಡೆದಿದ್ದು ಮೂರು ಮಂದಿ ಗಾಯಗೊಂಡಿದ್ದಾರೆ.
ಹೊಡೆದಾಟಕ್ಕೆ ಕಾರಣ ತಿಳಿದು ಬಂದಿಲ್ಲ. ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸಹಿತ ಪೊಲೀಸರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿ ಸಮೀರ್, ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದ ಆರೋಪಿ ಅನ್ಸಾರ್ ಮತ್ತು ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದ ಆರೋಪಿ ಝೈನುದ್ದೀನ್ ನಡುವೆ ಹೊಡೆದಾಟ ನಡೆದಿದೆ.
ಅಡುವೆ ಸ್ಪೂನ್ ಸಹಿತ ಇತರ ಅಡುಗೆ ಪರಿಕರಗಳನ್ನು ಬಳಸಿ ಹೊಡೆದಾಟ ನಡೆಸಿದ್ದಾರೆ.