ಬೆಂಗಳೂರು: ಬಿಗ್‌ಬಾಸ್ ರಿಯಾಲಿಟಿ ಶೋ ಸೀಸನ್ – 8 ಭರ್ಜರಿಯಾಗಿ ಮುಂದುವರಿಯುತ್ತಿದ್ದು ವಾರದ ಕೊನೆಯಲ್ಲಿ ಕಾಣಿಸಿಕೊಳ್ಳುವ ನಟ ಕಿಚ್ಚ ಸುದೀಪ್ ಈ ವಾರದ ಎಪಿಸೋಡ್‌ನಲ್ಲಿ ಕಾಣಿಸಲ್ಲ.
ಬಿಗ್‌ಬಾಸ್‌ನಲ್ಲಿ ವಾರದ ಕೊನೆ ದಿನ ವಾರದ ಕಥೆ ಸದೀಪ್ ಜೊತೆ ನಡೆಯಲಿದೆ. ಈ ಎಪಿಸೋಡ್ ವೀಕ್ಷಣೆಗೆ ಕಿಚ್ಚ ಸುದೀಪ್ ಅಭಿಮಾನಿಗಳು ಮಗಿಬೀಳುತ್ತಾರೆ. ಆದರೆ ಈ ವಾರದ ವೀಕೆಂಡ್ ಎಪಿಸೋಡ್‌ಗೆ ನಾನು ಬರಲ್ಲ ಎಂದು ಸ್ವಂತ ಕಿಚ್ಚ ಸುದೀಪ್ ಅವರೇ ಟ್ವೀಟ್ ಮಾಡಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಗ್‌ಬಾಸ್‌ನ ಈ ವಾರದ ಕೊನೆಯ ಎಪಿಸೋಡ್‌ಗೆ ಬರಲು ಸಾಧ್ಯವಾಗುತ್ತಿಲ್ಲ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಸುದೀಪ್ ತನ್ನ ಅಭಿಮಾನಿಗಳಿಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ನಡುವೆ ವಾರದ ಕೊನೆ ದಿನ ಬಿಗ್‌ಬಾಸ್ ಕ್ರಿಯೇಟಿವ್ ಟೀಂ ಏನು ಮಾಡಲಿದೆ ಎಂಬುದು ಬಿಗ್‌ಬಾಸ್ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.