ಚಿಕ್ಕಮಗಳೂರು: ಕೊರೋನ ಸೋಂಕು ತೀವ್ರವಾಗಿ ಹರಡುತ್ತಿರುವ ಭೀತಿಯ ನಡುವೆಯೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ಬಿಯರ್ ತುಂಬಿದ ಲಾರಿಯಿಂದ ಜನರು ಮುಗಿಬಿದ್ದು ಬಿಯರ್ ಬಾಟಲಿಗಳನ್ನು ಹೊತ್ತುಕೊಂಡು ಹೋಗಿರುವ ಘಟನೆ ಇಂದು ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಎಂಸಿ ಹಳ್ಳಿ ಸಮೀಪ ರಾಷ್ಟಿçÃಯ ಹೆದ್ದಾರಿಯಲ್ಲಿ ಇಂದು ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದ್ದು ಮರ ಲಾರಿಯ ಮೇಲೆ ಬಿದ್ದು ಅಪಘಾತ ಸಂಭವಿಸಿದೆ. ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಈ ಲಾರಿಯಲ್ಲಿ ಮೈಸೂರು ನಂಜನಗೂಡಿAದ ಕಿಂಗ್ ಫಿಷರ್ ಬಿಯರ್ ಸಾಗಿಸಲಾಗುತ್ತಿತ್ತು. ಲಾರಿಯಲ್ಲಿದ್ದ 1,150 ಬಾಕ್ಸ್ ಬಿಯರ್‌ಗಳಲ್ಲಿ 507 ಬಾಕ್ಸ್ಗಳು ಮಾತ್ರ ಉಳಿದಿವೆ. ಉಳಿದವುಗಳನ್ನು ಜನ ತೆಗೆದುಕೊಂಡು ಹೋಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ಚದುರಿಸಿದ್ದಾರೆ.