ಬಂಟ್ವಾಳ: ಕುಂಭೋದರಿ ಯಕ್ಷ ಕಲಾ ತಂಡ ಇದರ ನೂತನ ಯಕ್ಷಗಾನ ಪ್ರಸಂಗ ಶ್ರೀನಿವಾಸ ಸಾಲ್ಯಾನ್ ವಿರಚಿತ ಕುಂಭೋದರಿ ದೇವಿ ಮಹಾತ್ಮೆ ಇದರ ಮಹೂರ್ತ ಬಿ.ಸಿ.ರೋಡಿನ ಕುಲಾಲ ಮಠದ ಶ್ರೀ ಕುಂಭೋದರಿ ದೇವಸ್ಥಾನದಲ್ಲಿ ಮಂಗಳವಾರ ನಡೆಯಿತು. ಬಂಟ್ವಾಳದ ಕುಂಭೋದರಿ ಕಲಾ ತಂಡದ ಸದಸ್ಯರಾದ ನಾರಾಯಣ ಸಿ. ಪೆರ್ನೆ, ಯಾದವ ಕುಲಾಲ್ ಅಗ್ರಬೈಲು, ಸುಕುಮಾರ್ ಬಂಟ್ವಾಳ, ಕುಂಭೋದರಿ ದೇವಸ್ಥಾನದ ಅರ್ಚಕ ಮೋಹನ್ ಕುರ್ನಾಡು, ದೇವಸ್ಥಾನದ ಹಿರಿಯರಾದ ಚಂದಪ್ಪ ದೇವಂದಬೆಟ್ಟು, ಕ್ಷೇತ್ರದ ಸಹಾಯಕ ಮಧುರಾಜ್ ಕಾಮಾಜೆ ಈ ಸಂಧರ್ಭ ಉಪಸ್ಥಿತರಿದ್ದರು.
ಮುಮ್ಮೇಳದಲ್ಲಿ ಕುಲಾಲ ಸಮುದಾಯದ ಕಲಾವಿದರನ್ನೊಳಗೊಂಡ ಕುಂಭೋಧರಿ ಯಕ್ಷ ತಂಡವಾಗಿರುತ್ತದೆ.